

ಬೈಂದೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸುವರ್ಣ ಸಂಭ್ರಮ-50 ಸಂಭ್ರಮಾಚರಣೆ ಪ್ರಯುಕ್ತ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಪ್ಪುಂದ ರಾಜೇಶ್ ಪಡಿಯಾರ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ -2024 ನೀಡಿ ಗೌರವಿಸಲಾಯಿತು. ಸುಗಮ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಉಪ್ಪುಂದ ರಾಜೇಶ್ ಪಡಿಯಾರ್ ಅವರು ಉಪ್ಪುಂದ ಪ್ರಭಾಕರ ಪಡಿಯಾರ್ ಹಾಗೂ ಸುಧಾ ಪಡಿಯಾರ್ ದಂಪತಿ ಪುತ್ರ. ದೇಶ ವಿದೇಶಗಳಲ್ಲಿ ದಾಸರಪದ ಹಾಗೂ ಸುಗಮ ಸಂಗೀತದ ಪ್ರದರ್ಶನ ನೀಡಿದವರು. ಆಕಾಶವಾಣಿಯ ಬಿ ಶ್ರೇಣಿಯ ಕಲಾವಿದರು.