ಶ್ರೀ ಮಹಾವಿಷ್ಣು ಮಂದಿರದಿಂದ ಹುಲ್ಲು ವಿತರಣೆ

hullu
Published on

ಕೋಟ: ಶ್ರೀ ಮಹಾವಿಷ್ಣು ವೈದಿಕ ಮಂದಿರದ ಗೋಗ್ರಾಸ ನಿಧಿಯಿಂದ ನೀಲಾವರ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಮತ್ತು ಬಾಳೆಕುದ್ರು ಮಠದ ಗೋಶಾಲೆ ಸಹಿತ ತಾಲೂಕಿನ ವಿವಿಧ ಗೋಶಾಲೆಗಳಿಗೆ ಒಣಹುಲ್ಲು ಹಸ್ತಾಂತರಿಸಲಾಯಿತು. ಬಳಿಕ ಭಟ್ಟಮಾಣಿ ಶಂಕರನಾರಾಯಣ ದೇವಸ್ಥಾನದ ಆಡಳಿತದ ಶ್ರೀ ಮಹಾವಿಷ್ಣು ವೈದಿಕ ಮಂದಿರ ವತಿಯಿಂದ ಅಶಕ್ತರಿಗೆ ಧನಸಹಾಯ ನೀಡಲಾಯಿತು. ಪ್ರಮುಖರಾದ ಚಂದ್ರಶೇಖರ ಉಪಾಧ್ಯಾಯ, ಜಿ.ಶಿವಾನಂದಮಯ್ಯ, ಜಿ.ರಾಮಚಂದ್ರ ಐತಾಳ್, ಉದಯ ಮಯ್ಯ, ಕಾಶಿ ಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net