ಲಾವಣ್ಯಗೆ ಕನ್ನಡ ಪಯಸ್ವಿನಿ ಪ್ರಶಸ್ತಿ

award
ಲಾವಣ್ಯಗೆ ಕನ್ನಡ ಪಯಸ್ವಿನಿ ಪ್ರಶಸ್ತಿ 2024
Published on

ಗಂಗೊಳ್ಳಿ: ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ರಾಜ್ಯ ಸ್ಪಂದನ ಸಿರಿ ವೇದಿಕೆ , ಕೇಂದ್ರ ಕಚೇರಿ-ಹಾಸನ ಮತ್ತು ವಿಸ್ಡಮ್ ಇನ್‌ಸ್ಟಿಟ್ಯೂಷನ್ಸ್ ನೆಟ್ವರ್ಕ್ ಕಾಸರಗೋಡು ಸಹಯೋಗದಲ್ಲಿ ಇತ್ತೀಚೆಗೆ ನಡೆದ ಕೇರಳ-ಕರ್ನಾಟಕ ಸ್ಪಂದನ ಸಿರಿ, ಶಿಕ್ಷಣ, ಕೃಷಿ, ಸಂಸ್ಕೃತಿ ಸಮ್ಮೇಳನ 2024ರಲ್ಲಿ ಲಾವಣ್ಯ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ಕಲೆ ಹಾಗೂ ಕ್ರೀಡಾ ಕ್ಷೇತ್ರ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರು ಕುಂದಾಪುರದ ಉಪ್ಪಿನಕುದ್ರು ಗ್ರಾಮದ ದಿ.ಗಣೇಶ್ ಶೇರುಗರ್ ಹಾಗೂ ಪ್ರೇಮಲತಾ ದಂಪತಿ ಪುತ್ರಿ. ಪ್ರಸ್ತುತ ಲಾವಣ್ಯ ಗಂಗೊಳ್ಳಿಯ ಸ.ವಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net