

ಮಂಜೇಶ್ವರ: ಬ್ರಿಟಿಷ್ ವಸಾಹತುಶಾಹಿಯನ್ನು ವಿರೋಧಿಸಿದ ಈರ್ವರು ಮಹಾನ್ ವ್ಯಕ್ತಿಗಳು ಮಹಾತ್ಮಗಾಂಧಿ ಮತ್ತು ಗೋವಿಂದ ಪೈಗಳು. ಆದರೆ ಆ ವ್ಯವಸ್ಥೆಯನ್ನು ವಿರೋಧಿಸಿದರೇ ಹೊರತು ಆ ಸಂಸ್ಕೃತಿ ವಿರೋಧಿಸಲಿಲ್ಲ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದರು.
ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡಲ್ಲಿ ಇತ್ತೀಚೆಗೆ ನಡೆದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯ ನೇತೃತ್ವದಲ್ಲಿ ನಡೆದ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ, ರಾಷ್ಟ್ರಪಿತ ಮಹಾತ್ಮಗಾಂಧಿ-ರಾಷ್ಟ್ರಕವಿ ಗೋವಿಂದಪೈ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪ್ರಸನ್ನ ವಿಷಯ ಮಂಡನೆ ಮಾಡಿದರು. ಗೋವಿಂದ ಪೈ ಸ್ಮಾರಕ ಗ್ರಂಥಾಲಯದ ಅಧ್ಯಕ್ಷ ಉಮೇಶ್ ಎಂ.ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ಉಮೇಶ್, ಕಮಲಾಕ್ಷ ಡಿ, ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು. ಉದಯ ಸಾರಂಗ ನಿರ್ದೇಶಿಸಿದ ನಾಡೋಜ ಕಯ್ಯರ ಕಿಞ್ಞಣ್ಣ ರೈ ಅವರ ಕಥನಕಾವ್ಯ ಆಧಾರಿತ ಪಂಜರದ ಗಿಳಿ ನಾಟಕ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡಿತು. ಬಾಲಕೃಷ್ಣ ಶೆಟ್ಟಿಗಾರ್ ಸ್ವಾಗತಿಸಿದರು. ಜಯಂತ್ ವಂದಿಸಿದರು.