ಹಿಂದಿ ರಾಷ್ಟ್ರಭಾಷೆ ಎಂದು ಹೇಳಿಲ್ಲ, ಹೇಳಲ್ಲ; ಕನ್ನಡವೇ ನನ್ನ ಬಾಳಿನ ರಾಷ್ಟ್ರಭಾಷೆ: ಯೋಗರಾಜ್ ಭಟ್​

Yogaraj Bhat
Published on

ಬೆಂಗಳೂರು: ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹಿಂದಿಯೇ ರಾಷ್ಟ್ರಭಾಷೆ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ-ವಿರೋಧ ಎಲ್ಲವಕ್ಕೂ ಇದೀಗ ಅವರೇ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಈ ಕುರಿತು ಕನ್ನಡದಲ್ಲೇ ಕೈಬರಹದಲ್ಲಿ ಬರೆಯುವ ಮೂಲಕ ಅವರು ಸ್ಪಷ್ಟನೆ ನೀಡಿದ್ದು, ಕನ್ನಡವೇ ನನ್ನ ಬಾಳಿನ ಏಕೈಕ ರಾಷ್ಟ್ರಭಾಷೆ ಎಂದು ಘೋಷಿಸಿದ್ದಾರೆ. ತಮ್ಮ ಮಾತಿನ ಕುರಿತಾಗಿ ಉಂಟಾಗಿರುವ ಗೊಂದಲಗಳಿಗೆ ಅವರು ಲಿಖಿತವಾಗಿ ನೀಡಿರುವ ಸ್ಪಷ್ಟೀಕರಣದ ವಿವರ ಇಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net