

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಕಾಲಿಡುವುದಕ್ಕೂ ಮೊದಲು ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ನಡುವೆ ಸ್ನೇಹ ಇರಲಿಲ್ಲ. ಆದರೆ ಬಿಗ್ ಬಾಸ್ ಮನೆಯೊಳಗೆ ಅವರು ಆತ್ಮೀಯ ಸ್ನೇಹಿತರಾದರು. ಅಂತಿಮವಾಗಿ ಕಾರ್ತಿಕ್ ಮಹೇಶ್ ಟ್ರೋಫಿ ಗೆದ್ದರು.
ತುಕಾಲಿ ಸಂತೋಷ್ 5ನೇ ರನ್ನರ್ಅಪ್ ಹಾಗೂ ವರ್ತೂರು ಸಂತೋಷ್ 4ನೇ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ತುಕಾಲಿ ಸಂತೋಷ್ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ಮಾಡ್ತಿದ್ದಾರೆ.
ಇದೀಗ ಬಿಗ್‌ಬಾಸ್ ಫಿನಾಲೆ ಮುಗಿಸಿದ ಹಲವು ದಿನಗಳ ಬಳಿಕ ಸ್ಪರ್ಧಿಗಳೆಲ್ಲಾ ಒಟ್ಟಿಗೆ ಸೇರಿದ್ದಾರೆ. ತುಕಾಲಿ ಸಂತೋಷ್, ನೀತು, ಮೈಕಲ್, ಇಶಾನಿ, ಪವಿ ಪೂವಯ್ಯ, ರಕ್ಷಕ್ ಬುಲೆಟ್ ಮತ್ತು ತನಿಷಾ, ಸಂಗೀತಾ ಇಂದು ವರ್ತೂರು ಸಂತೋಷ್ ಅವರ ಮನೆಗೆ ಭೇಟಿ ನೀಡಿದ್ದಾರೆ.
ಭಾನುವಾರ (ಇಂದು) ಹಳ್ಳಿಕಾರ್ ವರ್ತೂರು ಸಂತೋಷ್ ಅವರ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಅಕ್ಕನ ಮಗಳ ನಾಮಕರಣ ಸಮಾರಂಭವಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಬಳಿಯ ಗುಂಜೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಬಿಗ್‌ಬಾಸ್ ಸ್ಪರ್ಧಿಗಳು ಆಗಮಿಸಿದ್ದು ವಿಶೇಷವಾಗಿದೆ. ಇನ್ನೂ, ಮನೆಗೆ ಆಗಮಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರೀತಿಯಿಂದ ಶಾಲು ಹೊದಿಸಿ ಬಳಿಕ ಮೈಸೂರು ಪೇಟ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ ಸಂತೋಷ್.
ಅಸಲಿ ಸಂಗತಿ ಇಲ್ಲಿದೆ ನೋಡಿ...ಗೆಳೆಯ ಮಾತ್ರವಲ್ಲ ತಮ್ಮನಂತಿರುವ ತುಕಾಲಿ ಸಂತೋಷ್‌ಗೆ, ವರ್ತೂರು ಸಂತೋಷ್ ಭರ್ಜರಿ ಗಿಫ್ಟ್ವೊಂದನ್ನು ಕೊಟ್ಟಿದ್ದಾರೆ. ಚಿನ್ನದ ಡಾಲರ್ ಕೊಟ್ಟಿದ್ದಾರೆ ವರ್ತೂರು ಸಂತೋಷ್. ಪ್ರೀತಿಯ ಗೆಳೆಯ ತುಕಾಲಿ ಸಂತೋಷ್‌ಗೆ ‘ಸಂತು ಹಾರ್ಟ್ ಪಂತು’ ಹೆಸರಿನ ಪೆಂಡೆಂಟ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.
ರೈತರಿಗಾಗಿ ಏನಾದರೂ ಮಾಡಬೇಕು ಎಂಬ ನಿನ್ನ ಆಸೆ ಫಲಿಸಲಿ. ಇಡೀ ದೇಶವೇ ಮೆಚ್ಚುವ ನಿನ್ನ ಹಳ್ಳಿಕಾರ್ ಸಂತತಿ ಉಳಿಸುವ ನಿನ್ನ ಹೋರಾಟಕ್ಕೆ ಜಯ ಸಿಗಲಿ.. ವರ್ತೂರು ಸಂತೋಷ್ ಹೊರಟರೆ ಜಾತ್ರೆ, ನಿಂತರೆ ಚರಿತ್ರೆ ಅನ್ನೋದು ನಿಜವಾಗಲಿ.." ಎಂದು ವರ್ತೂರು ಸಂತೋಷ್‌ಗೆ ಹಾರೈಸಿದ್ದಾರೆ 'ತುಕಾಲಿ' ಸಂತು.