ಹಳ್ಳಿ ಹಳ್ಳಿಯಲ್ಲೂ ಕನ್ನಡ ಜಾಗೃತಿ

7 RPT 1
ರಿಪ್ಪನ್‌ಪೇಟೆಯ ದೂನ ಗ್ರಾಮದಲ್ಲಿ ಮಲೆನಾಡ ಕನ್ನಡಿಗರ ಸೇನೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಸನ್ಮಾನಿಸಲಾಯಿತು. ಜಯಮ್ಮ, ಮಂಜುನಾಥ, ಕಳಸೆ ಚಂದ್ರಪ್ಪ ಇತರರಿದ್ದರು.
Published on

ರಿಪ್ಪನ್‌ಪೇಟೆ: ನಗರ ಮತ್ತು ಪಟ್ಟಣಗಳಿಗೆ ಸೀಮಿತವಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಇಂದು ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿದೆ. ಕನ್ನಡ ಭಾಷೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಅರಸಾಳು ಗ್ರಾಪಂ ವ್ಯಾಪ್ತಿಯ ದೂನ ಗ್ರಾಮದಲ್ಲಿ ಮಲೆನಾಡ ಕನ್ನಡಿಗರ ಸೇನೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ನಾಡು ಮತ್ತು ನುಡಿ ಬಗ್ಗೆ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ಹೊಂದಿದೆ. ಖಾಸಗಿ ಉದ್ಯೋಗ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ.75ರಷ್ಟು ಉದ್ಯೋಗ ನೀಡಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಅವರ ಚಿಂತನೆ. ಸರ್ಕಾರ ನೆಲ-ಜಲದ ಹೋರಾಟದಲ್ಲಿ ರಾಜಿಯಾಗದೆ ಸದಾ ಕನ್ನಡಿಗರ ಪರವಾಗಿದೆ ಎಂದು ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಜಯಮ್ಮ, ಸಂಘದ ಅಧ್ಯಕ್ಷ ಮಂಜುನಾಥ, ಮುಖಂಡರಾದ ಕಳಸೆ ಚಂದ್ರಪ್ಪ, ಡಿ.ಇ.ಮಧುಸೂದನ, ಸೋಮಶೇಖರ, ರಾಜು, ನಾಗಪ್ಪ, ಚಂದ್ರೇಶ್, ಆಸ್ೀ, ಸಿದ್ದೇಶ, ರೇಣುಕಪ್ಪ, ಮುರಿಗೆಪ್ಪ, ಕುಮಾರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net