ಬೆಂಗಳೂರು: ನಟಿ ಶ್ರೀಲೀಲಾ ಅವರು ಸದ್ಯ ಕ್ನನಡ, ತೆಲುಗು ಅಂತ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು, ಮುದ್ದು ಬೆಡಗಿ ಶ್ರೀಲೀಲಾ ಅಭಿನಯದ 'ಬೈ ಟು ಲವ್' ಕನ್ನಡ ಸಿನಿಮಾ ಬಿಡುಗಡೆಯಾಗಲು ರೆಡಿಯಾಗಿದೆ. 'ಬೈ ಟು ಲವ್' ಸಿನಿಮಾ ಫೆಬ್ರವರಿ 18ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಕುರಿತು ಮತ್ತು ಒಂದು ವಿಶೇಷ ಕಾರಣಕ್ಕೆ ಶ್ರೀಲೀಲಾ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೌದು, ಶ್ರೀಲೀಲಾ ಅವರು ಇಬ್ಬರು ಮುದ್ದಾದ ಮಕ್ಕಳನ್ನು ದತ್ತು ಪಡೆದಿದ್ದಾರೆ. 'ಕಿಸ್' ಬೆಡಗಿ ಇಬ್ಬರೂ ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ. ಈ ಸುದ್ದಿ ಈಗ ಸಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೇ ಎಲ್ಲರನ್ನು ಶಾಕ್ ಮತ್ತು ಖುಷ್ ಕೂಡಾ ಮಾಡಿದೆ.