'ಸ್ಪಂದನಾ ಮರಣೋತ್ತರ ಪರೀಕ್ಷೆ ವರದಿ ಬರುವವರೆಗೆ ಊಹಾಪೋಹ ಬೇಡ'

spandana
Published on

ಬೆಂಗಳೂರು: ಸ್ಪಂದನಾ ಮರಣೋತ್ತರ ಪರೀಕ್ಷೆ ವರದಿ ಬರುವವರೆಗೆ ಊಹಾಪೋಹ ಬೇಡ, ಅವರ ಕುಟುಂಬಸ್ಥರು ಇದೇ ಮಾತು ಹೇಳಿದ್ದಾರೆ ಎಂದು ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದ್ ಹೇಳಿದರು.

ಸ್ಪಂದನಾ ನಾನು ನೋಡಿ ಬೆಳೆದ ಹುಡುಗಿ. ಕಳೆದ 29 ವರ್ಷದ ನೆನಪು ಆಗುತ್ತಿದೆ 29 ವರ್ಷದ ಹಿಂದೆ ನಾನೂ ನೋವು ಅನುಭವಿಸಿದ್ದೇನೆ. ಸದ್ಯ ರಾಘವೇಂದ್ರ ಅನಾಥನಾಗಿದ್ದಾನೆ. ಒಂದು ಮಗು ಇದೆ. ಸ್ಪಂದನಾ ತಂದೆ ದಕ್ಷ ಅಧಿಕಾರಿ. ದಕ್ಷ ಅಧಿಕಾರಿ ಮಗಳು ಸ್ಪಂದನಾ ಎಂದು ಸಾರಾ ಗೋವಿಂದ್ ನೋವನ್ನು ವ್ಯಕ್ತಪಡಿಸಿದ್ದಾರೆ.

ಸ್ನೇಹಿತನ ಮಗಳ ಸಾವನ್ನು ನೆನೆದು ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕೂಡ ಕಣ್ಣೀರು ಹಾಕಿದ್ದಾರೆ. "ನನ್ನ ಮಗಳಂತೆಯೇ ಆಡಿಕೊಂಡು ಬೆಳೆದ ಮಗಳು. ಅವರ ಸಾವು ನಮ್ಮ ಶಿವರಾಂ ಕುಟುಂಬಕ್ಕೆ ತುಂಬಲಾರದ ನಷ್ಟ'' ಎಂದು ಸ್ಪಂದನ ನಿವಾಸದ ಬಳಿ ಟೈಗರ್ ಅಶೋಕ್ ದುಖ: ವ್ಯಕ್ತಪಡಿಸಿದ್ದಾರೆ.

ಸ್ಪಂದನಾ ಅವರ ಶರೀರದ ಪೋಸ್ಟ್ ಮಾರ್ಟಂ ಮುಗಿದಿದ್ದು, ವಿದೇಶಾಂಗ ಸಚಿವಾಲಯದ ಪ್ರೋಟೋ ಕಾಲ್ ಮುಗಿದ ನಂತರ ನಾಳೆ ಅಥವಾ ನಾಡಿದ್ದು ರಾಜ್ಯಕ್ಕೆ ಶರೀರ ರವಾನೆ ಮಾಡಲಾಗುತ್ತದೆ ಎಂದು ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾತ್ರಿ ಮಲಗಿದ್ದ ಸ್ಪಂದನಾ ಹಾಸಿಗೆಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net