More

    ಕರೊನಾ ಸೋಂಕಿತ ಗಾಯಕಿ ಕನ್ನಿಕಾ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ಕಳೆದ ವಾರವಷ್ಟೇ ಕರೊನಾ ಸೋಂಕಿನಿಂದ ಆಸ್ಪತ್ರೆ ಪಾಲಾಗಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್, ಆರಂಭದಲ್ಲಿ ಚಿಕಿತ್ಸೆ ವಿಚಾರದಲ್ಲಿ ಒಂದಷ್ಟು ಗಲಾಟೆ ಮಾಡಿಕೊಂಡು, ಸುದ್ದಿಯಾಗಿದ್ದರು. ನನಗೆ ವಿವಿಐಪಿ ಚಿಕಿತ್ಸೆ ಬೇಕು ಎಂದು ಪಟ್ಟು ಹಿಡಿದ್ದಿದ್ದರು. ಆ ವಿಚಾರ ಹೊರಗಿನವರಿಗೆ ಗೊತ್ತಾಗುತ್ತಿದ್ದಂತೆ, ಟ್ರೋಲ್ ಆಗಿದ್ದರು. ‘ಬಹುತೇಕರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ವಿವಿಐಪಿ ಚಿಕಿತ್ಸೆ ಬೇಕಾ?’ ಎಂದು ಟ್ರೋಲಿಗರು ಕಾಲೆಳೆದಿದ್ದರು. ಇದೀಗ ಇದೇ ಕನ್ನಿಕಾ ಹೇಗಿದ್ದಾರೆ ಎಂಬುದಕ್ಕೆ ಲಖನೌದ ಸಂಜಯ್ ಗಾಂಧಿ ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈವರೆಗೂ ಒಟ್ಟು ಐದು ಬಾರಿ ಪರೀಕ್ಷೆ ನಡೆಸಿದರೂ ಪಾಸಿಟಿವ್ ಇರುವುದು ದೃಢಪಟ್ಟಿದೆಯಾದರೂ, ಸುಧಾರಿಸಿಕೊಳ್ಳುತ್ತಿದ್ದಾರಂತೆ. 
    ಅಧಿಕೃತ ಮೂಲಗಳ ಮಾಹಿತಿಗೂ ಮುನ್ನ, ಆರೋಗ್ಯ ಕ್ಷಿಣಿಸುತ್ತಿದೆ. ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆ ಎಲ್ಲ ವದಂತಿಗಳನ್ನು ಸುಳ್ಳು ಎಂದಿರುವ ಸಂಜಯ್ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ. ಆರ್‌ಕೆ. ಡಿಮನ್, ಕನ್ನಿಕಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಸರಿಯಾಗಿ ಊಟ ಮಾಡುತ್ತಿದ್ದಾರೆ. ಗಂಭೀರತೆ ಇಲ್ಲ ಎಂದಿದ್ದಾರೆ. ಅದಾದ ಬಳಿಕ, ಜಾಲತಾಣದಲ್ಲಿ ಕನ್ನಿಕಾ ಸಹ ಸ್ಪಷ್ಟೀಕರಣ ಕೊಟ್ಟಿದ್ದಾರೆ. ‘ನಾನು ಕ್ಷೇಮವಾಗಿದ್ದೇನೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಐಸಿಯುನಲ್ಲಿ ನಾನಿಲ್ಲ. ಮುಂದಿನ ಪರೀಕ್ಷೆಯಲ್ಲಿ ನೆಗೆಟಿವ್ ಬರಲಿದೆ. ಮನೆಗೆ ಹೋಗುವ ದಾವಂತದಲ್ಲಿದ್ದೇನೆ’ ಎಂದಿದ್ದಾರೆ. ಅಂದಹಾಗೆ, ಮಾರ್ಚ್ 9ರಂದು ಲಂಡನ್‌ನಿಂದ ಹಿಂದಿರುಗಿದ್ದ ಕನ್ನಿಕಾ, ಮಾರ್ಚ್ 20ಕ್ಕೆ ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. (ಏಜೆನ್ಸೀಸ್)

    ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ಕೊಟ್ಟ ಪುನೀತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts