ಮುಂಬೈ: ಕಂಗನಾ ಅಭಿನಯದ ‘ಎಮರ್ಜೆನ್ಸಿ’ಗೆ ಪ್ರಮಾಣಪತ್ರ ನೀಡುವಲ್ಲಿ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ವಿಳಂಬ ಮಾಡುತ್ತಿರುವುದಕ್ಕೆ ಬಾಂಬೆ ಹೈಕೋರ್ಟ್ ಗುರುವಾರ (ಸೆ.19) ಅಸಮಾಧಾನ ವ್ಯಕ್ತಪಡಿಸಿದೆ. ಸೆ.25ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೆನ್ಸಾರ್ ಮಂಡಳಿಗೆ ಸೂಚಿಸಿದೆ.
ಇದನ್ನೂ ಓದಿ: ಭಾರತ- ಬಾಂಗ್ಲಾ ಮೊದಲ ಟೆಸ್ಟ್: ಕಷ್ಟ ಕಾಲದಲ್ಲಿ ವಿಕೆಟ್ ಕಾಯ್ದುಕೊಂಡ ಜೈಸ್ವಾಲ್- ಯಶಸ್ವಿ ಅರ್ಧಶತಕ!
ಸೃಜನಾತ್ಮಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಭಯದಿಂದ ಸೆನ್ಸಾರ್ ಮಂಡಳಿಯು ಚಲನಚಿತ್ರವನ್ನು ಪ್ರಮಾಣೀಕರಿಸಲು ನಿರಾಕರಿಸುವಂತಿಲ್ಲ ಎಂದು ಹೇಳಿದೆ.
ಸಿನಿಮಾದಲ್ಲಿ ತೋರಿಸಿದ್ದನ್ನೆಲ್ಲಾ ನಂಬುವಷ್ಟು ಮುಗ್ಧರು ಈ ದೇಶದ ಜನರು ಇದ್ದಾರೆಂದು ಸಿಬಿಎಫ್‌ಸಿ ಭಾವಿಸಿದೆಯೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ.
“ಎಮರ್ಜೆನ್ಸಿ” ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸಿಬಿಎಫ್ಸಿಗೆ ನಿರ್ದೇಶನ ಕೋರಿ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.
ಅಗ್ನಿವೀರರಿಗೆ ಮನೆ, ಗೃಹಿಣಿಯರಿಗೆ 500ರೂ.ಗೇ ಸಿಲಿಂಡರ್..ಹರಿಯಾಣದಲ್ಲಿ ಬಿಜೆಪಿ ಆಶ್ವಾಸನೆ!