

ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಇದೀಗ ಮತ್ತೊಂದು ಹೇಳಿಕೆ ನೀಡಿ ಸದ್ದು ಮಾಡುತ್ತಿದ್ದಾರೆ. ಕರಣ್ ಜೋಹರ್ ವಿರುದ್ಧ ತಿರುಗುಬಿದ್ದಿದ್ದ ನಟಿ, ಇದೀಗ ಮತ್ತೆ ಕರಣ್ ಅವರ ವಿಚಾರವನ್ನೇ ಕೈಗೆತ್ತಿಕೊಂಡಿದ್ದಾರೆ.
ಕರಣ್ ಜೋಹರ್ಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಮರಳಿ ಪಡೆಯುವಂತೆ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಕರಣ್ ವಿರುದ್ಧ ಒಂದಷ್ಟು ಆರೋಪಗಳನ್ನೂ ಮಾಡಿದ್ದಾರೆ. ಸುಶಾಂತ್ ಸಿನಿ ಜೀವನವನ್ನು ಹಾಳು ಮಾಡಲು ಯತ್ನಿಸಿದ್ದಾರೆ. ಉರಿ ದಾಳಿ ವೇಳೆ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೀಗ ಸೈನ್ಯದ ವಿರುದ್ಧವೇ ಸಿನಿಮಾ ಮಾಡಿದ್ದಾರೆ’ ಎಂದು ದೂರಿದ್ದಾರೆ.
ಇದನ್ನೂ ಓದಿ: ಮತ್ತೆ ಶುರುವಾಯ್ತು ‘ಭಜರಂಗಿ 2’ ಚಿತ್ರದ ಚಿತ್ರೀಕರಣ …
ಇತ್ತೀಚೆಗಷ್ಟೇ ನೆಟ್ಫ್ಲಿಕ್ಸ್ನಲ್ಲಿ ಗುಂಜನ್ ಸಕ್ಸೆನಾ; ದಿ ಕಾರ್ಗಿಲ್ ಗರ್ಲ್ ಸಿನಿಮಾ ತೆರೆಕಂಡಿತ್ತು. ಸಿನಿಮಾ ಬಿಡುಗಡೆ ಆದಾಗಿನಿಂದ ಒಂದಲ್ಲ ಒಂದು ರೀತಿಯ ಕಾಂಟ್ರವರ್ಸಿ ಸೃಷ್ಟಿಸಿತ್ತು. ಗುಂಜನ್ಗೂ ಮುನ್ನ ಶ್ರೀವಿದ್ಯಾ ರಾಜನ್ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿರುವ ಬಗ್ಗೆ ಹೇಳಿಕೊಂಡಿದ್ದರು. ಇದೆಲ್ಲವನ್ನು ಅಸ್ತ್ರವಾಗಿಟ್ಟುಕೊಂಡ ಕಂಗನಾ, ಇದೀಗ ಕರಣ್ ವಿರುದ್ಧ ಮತ್ತೆ ತಿರುಗಿ ಬಿದ್ದಿದ್ದಾರೆ.
ಅಂದಹಾಗೆ, ಇದೇ ವರ್ಷ ಜನವರಿ 26ರಂದು ಕರಣ್ ಜೋಹರ್, ಕಂಗನಾ ರಣಾವತ್, ಏಕ್ತಾ ಕಪೂರ್ ಸೇರಿ ಹಲವು ಬಾಲಿವುಡ್ ಮಂದಿಗೆ ಪದ್ಮಶ್ರಿ ನೀಡಲಾಗಿತ್ತು. (ಏಜೆನ್ಸೀಸ್)