ಪಂಜಾಬ್‌ನಲ್ಲಿ ‘ಎಮರ್ಜೆನ್ಸಿ’ ಬಿಡುಗಡೆಗೆ ನಿಷೇಧ; ಬಿಟೌನ್​ ಕ್ವೀನ್​​​ ವಿಡಿಯೋ ಮಾಡಿ ಹೇಳಿದಿಷ್ಟು.. | Kangana Ranaut

Untitled design - 2025-01-20T155903.324
Published on

ಮುಂಬೈ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅಧಿಕಾರವಧಿಯಲ್ಲಿ ದೇಶದಲ್ಲಿನ ತುರ್ತುಪರಿಸ್ಥಿತಿಯ ಘಟನೆಯನ್ನು ಆಧರಿಸಿದ ಕಂಗನಾ ರಣಾವತ್(Kangana Ranaut) ಅಭಿನಯದ 'ಎಮರ್ಜೆನ್ಸಿ' ಸಿನಿಮಾ 17 ಜನವರಿ 2025 ರಂದು ಬಿಡುಗಡೆಯಾಯಿತು. ಸಿನಿಮಾ ನೋಡಿ ಹಿಂತಿರುಗಿದ ಪ್ರೇಕ್ಷಕರು ಕಂಗನಾ ಅಭಿನಯವನ್ನು ಕೊಂಡಾಡುತ್ತಿದ್ದಾರೆ. ಅದೇ ಸಮಯದಲ್ಲಿ ವಿಮರ್ಶಕರು ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಆದರೆ ಕಂಗನಾ ಅವರ ಎಮರ್ಜೆನ್ಸಿ ಸಿನಿಮಾ ಪಂಜಾಬ್‌ನಲ್ಲಿ ಬಿಡುಗಡೆಯಾಗಿಲ್ಲ. ಈ ಕುರಿತು ನಟಿ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋವೊಂದನ್ನು ಹಂಚಿಕೊಂಡಿರುವ ಕಂಗನಾ ರಣಾವತ್​​, ವಿಡಿಯೋದಲ್ಲಿ ಚಿತ್ರಕ್ಕೆ ಸಿಗುತ್ತಿರುವ ಪ್ರೀತಿಗೆ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ಜತೆಗೆ ಪಂಜಾಬ್​​ ತನ್ನ ಸಿನಿಮಾ ಬಿಡುಗಡೆಯಾದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ವಿಡಿಯೋ ಆರಂಭದಲ್ಲಿ ಚಿತ್ರತಂಡದ ಪ್ರತಿಯೊಬ್ಬ ಸದಸ್ಯರ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ನೀವು ನನಗೆ ನೀಡಿದ ಪ್ರೀತಿ ಮತ್ತು ಗೌರವಕ್ಕೆ ನನ್ನಲ್ಲಿ ಪದಗಳಿಲ್ಲ, ಆದರೆ ನನ್ನ ಹೃದಯದಲ್ಲಿ ಇನ್ನೂ ಸ್ವಲ್ಪ ನೋವು ಇದೆ ಎಂದು ತಿಳಿಸಿದರು.

ಪಂಜಾಬ್! ಪಂಜಾಬ್‌ನಲ್ಲಿ ನನ್ನ ಸಿನಿಮಾ ಅತ್ಯುತ್ತಮ ಪ್ರದರ್ಶನ ನೀಡುತ್ತವೆ ಎಂದು ಉದ್ಯಮದಲ್ಲಿ ಹೇಳಲಾಗಿದೆ. ಆದರೆ ಇಂದು ಪಂಜಾಬ್‌ನಲ್ಲಿ ನನ್ನ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡಿಲ್ಲ. ಕೆನಡಾ ಮತ್ತು ಬ್ರಿಟನ್‌ನಲ್ಲಿಯೂ ಇದೇ ರೀತಿಯ ಕೆಲವು ದಾಳಿಗಳನ್ನು ನಡೆಸಲಾಗುತ್ತಿದೆ. ಆಯ್ದ ಕೆಲವರಿಂದ ಈ ಬೆಂಕಿ ಹಚ್ಚಲಾಗಿದೆ. ನೀವು ಮತ್ತು ನಾನು ಈ ಬೆಂಕಿಯಲ್ಲಿ ಉರಿಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಸ್ನೇಹಿತರೇ, ನನ್ನ ಚಿತ್ರ, ನನ್ನ ಆಲೋಚನೆಗಳು ಮತ್ತು ದೇಶದ ಮೇಲಿನ ನನ್ನ ಪ್ರೀತಿ ಈ ಚಿತ್ರದಲ್ಲಿ ಪ್ರತಿಫಲಿಸುತ್ತದೆ. ಈ ಚಿತ್ರ ನಮ್ಮನ್ನು ಒಂದುಗೂಡಿಸುತ್ತದೆಯೇ ಅಥವಾ ಇಬ್ಭಾಗ ಮಾಡುತ್ತದೆಯೇ ಎಂದು ಚಿತ್ರ ನೋಡಿದ ನಂತರ ನೀವೇ ನಿರ್ಧರಿಸಿ ಎಂದು ಹೇಳುತ್ತಾ, ನಾನು ಇನ್ನು ಮುಂದೆ ಏನು ಹೇಳುವುದಿಲ್ಲ. ಜೈ ಹಿಂದ್ ಧನ್ಯವಾದಗಳು ಎಂದು ವಿಡಿಯೋವನ್ನು ಕೊನೆಗೊಳಿಸಿದ್ದಾರೆ.

ಕಂಗನಾ ನಿರ್ದೇಶಿಸಿ ಮತ್ತು ಇಂದಿರಾಗಾಂಧಿ ಅವರು ಪಾತ್ರದಲ್ಲಿ ನಟಿಸಿರುವ ಎಮರ್ಜೆನ್ಸಿ ಸಿನಿಮಾದಲ್ಲಿ ಅನುಪಮ್ ಖೇರ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net