More

    ಕಂಗನಾ ರಣಾವತ್​ ಇನ್ಮುಂದೆ ಯುಪಿ ಸರ್ಕಾರದ “ಒಂದು ಜಿಲ್ಲೆ ಒಂದು ಉತ್ಪನ್ನ” ಯೋಜನೆಯ ರಾಯಭಾರಿ

    ಲಖನೌ: “ಒಂದು ಜಿಲ್ಲೆ ಒಂದು ಉತ್ಪನ್ನ” ಯೋಜನೆಯ ರಾಯಭಾರಿಯನ್ನಾಗಿ ಬಾಲಿವುಡ್​ ನಟಿ ಕಂಗನಾ ರಣಾವತ್ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರ ಪ್ರದೇಶದ ಸರ್ಕಾರ ಶುಕ್ರವಾರ ಹೆಸರಿಸಿದೆ.

    ನಟಿ ಕಂಗನಾ ಮುಖ್ಯಮಂತ್ರಿಗಳು ಅಧಿಕೃತ ನಿವಾಸದಲ್ಲಿ ಸಿಎಂ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ಚರ್ಚಿಸಿದರು.

    ರಾಜ್ಯದ 75 ಜಿಲ್ಲೆಗಳಾದ್ಯಂತ ಉತ್ಪನ್ನ ಹಾಗೂ ನಿರ್ದಿಷ್ಟ ಸಾಂಪ್ರದಾಯಿಕ ಕೈಗಾರಿಕಾ ಕೇಂದ್ರಗಳನ್ನು ರಚಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಕಾರ್ಯಕ್ರಮವನ್ನು ಆರಂಭಿಸಿದೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ) ನವನೀತ್​ ಸೆಹಗಾಲ್​, ಪ್ರಖ್ಯಾತ ನಟಿ ಕಂಗನಾ ಅವರು ಯುಪಿ ಸಿಎಂ ಯೋಗಿ ಅವರನ್ನು ಭೇಟಿ ಮಾಡಿದರು. ಇನ್ನು ಮುಂದೆ ಕಂಗನಾ ಅವರು ನಮ್ಮ ಒಡಿಒಪಿ ಯೋಜನೆ ರಾಯಭಾರಿ ಆಗಲಿದ್ದಾರೆಂದು ತಿಳಿಸಿದ್ದಾರೆ.

    ಹಿರಿಯ ಅಧಿಕಾರಿಯ ಪ್ರಕಾರ, ಭೇಟಿಯ ವೇಳೆ ಮುಖ್ಯಮಂತ್ರಿ ಮಾಡುತ್ತಿರುವ ಕೆಲಸಗಳನ್ನು ನಟಿ ಕಂಗನಾ ಶ್ಲಾಘಿಸಿದರು ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡುವಂತೆ ಸಿಎಂ, ಕಂಗನಾರ ಬಳಿ ವಿನಂತಿಸಿದರು ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಚಂದ್ರ ಗ್ರಹದಲ್ಲಿ ಸೈಟು ಆಮಿಷ: ಹಣ ಕಳ್ಕೊಂಡು ಕಣ್ಣೀರಿಡುತ್ತಿರುವ ಬೆಂಗ್ಳೂರು ಮಹಿಳೆ..!

    ರಾಜ್ಯದ 31ನೇ ಜಿಲ್ಲೆ ವಿಜಯನಗರ ಇಂದು ಅಧಿಕೃತ ಮುದ್ರೆ; ನನಸಾದ ದಶಕಗಳ ಕನಸು, ಸಿಎಂ ಅವರಿಂದ ಚಾಲನೆ..

    ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ; ಸಲಗ, ಕೋಟಿಗೊಬ್ಬನಿಗೆ ಸೂರಜ್ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts