

ಮಂಡ್ಯ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಬಾಡಿಗಾರ್ಡ್ ಎಂದು ಹೇಳಲಾದ ಕುಮಾರ್ ಶೆಟ್ಟಿ ಎನ್ನುವನನ್ನು ಮುಂಬೈ ಪೊಲೀಸರು ಕೆಆರ್ ಪೇಟೆ ತಾಲೂಕಿನ ಹೆಗ್ಗಡನಹಳ್ಳಿಯಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಂಧಿಸಿದ್ದಾರೆ.
ಸದ್ಯ ಕುಮಾರ್ನನ್ನು ಮುಂಬೈ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಮುಂಬೈಗೆ ಕರೆದೋಯ್ದಿದ್ದಾರೆ.
ಪ್ರಕರಣದ ಹಿನ್ನೆಲೆ ಏನು: ನಟಿ ಕಂಗನಾ ಅವರ ಬಾಡಿಗಾರ್ಡ್ ಆಗಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕುಮಾರ್ ಅಲಿಯಾಸ್ ಕುಮಾರ್ ಹೆಗಡೆ ಮುಂಬೈನಲ್ಲಿ ಯುವತಿಯೊಬ್ಬಳ್ಳನ್ನು ಪ್ರೀತಿಸುತ್ತಿದ್ದ. ನಂತರ ಅವಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ ಎನ್ನಲಾಗಿದೆ. ಬಳಿಕ ಆ ಯುವತಿ ಬಳಿ 50 ಸಾವಿರ ರೂಪಾಯಿ ಪಡೆದು ವಂಚನೆ ಮಾಡಿ, ತಲೆ ಮರೆಸಿಕೊಂಡಿದ್ದ.
ಈ ಕುರಿತು ಯುವತಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಳು. ದೂರು ಪಡೆದ ಪೊಲೀಸರು ಕಳೆದ ಒಂದು ತಿಂಗಳಿನಿಂದ ಕುಮಾರ್ನಿಗಾಗಿ ಹುಡುಕಾಟ ನಡೆಸಿದ್ದರು. ಈ ಕುರಿತು ಕಂಗನಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.