‘ಎಮರ್ಜೆನ್ಸಿ’ ಪ್ರಾಬ್ಲಮ್​ ನಡುವೆಯೇ ಹೊಸ ಸಿನಿಮಾ ಘೋಷಿಸಿದ ಕ್ವೀನ್​!

Untitled-design-49-1
Published on

ಮುಂಬೈ: ಬಿಟೌನ್​ ಕ್ವೀನ್​​ ಕಂಗನಾ ರಣಾವತ್​​ ಅವರ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್​ 6ರಂದು ರಿಲೀಸ್​ ಆಗಬೇಕಿದ್ದ ಎಮರ್ಜೆನ್ಸಿ ಸಿನಿಮಾ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ನಿಂದ ಗ್ರೀನ್​​​ ಸಿಗ್ನಲ್​​ ಸಿಗದೆ ಇಕ್ಕಟ್ಟಿನಲ್ಲಿ ಸಿಲುಕಿದೆ. ಇದೇ ಸಮಯದಲ್ಲಿ ನಟಿ ಕಂಗನಾ ತಮ್ಮ ಮುಂದಿನ ಪ್ರಾಜೆಕ್ಟ್​​​ ಅನ್ನು ಘೋಷಿಸಿದ್ದಾರೆ.

ಕಂಗನಾ ರಣಾವತ್​ ಅವರು ತಮ್ಮ ಮುಂದಿನ ಸಿನಿಮಾ ಭಾರತ ಭಾಗ್ಯ ವಿಧಾತ ಎಂದು ಘೋಷಿಸಿದ್ದಾರೆ. ಈ ಸಿನಿಮಾವನ್ನು ಮನೋಜ್ ತಪಾಡಿಯಾ ನಿರ್ದೇಶಿಸಲಿದ್ದಾರೆ. ಆದಿ ಮತ್ತು ತಂಡದೊಂದಿಗೆ ನಟಿ ಕಂಗಣಾ ಪೋಸ್​ ನೀಡುತ್ತಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ.

ಸಿನಿಮಾ ಬಗ್ಗೆ ನಟಿ ಕಂಗನಾ, #BharatBhagyaVdhaata ಪ್ರೇಕ್ಷಕರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುವ ಭರವಸೆ ಇದೆ. ನಿಜ ಜೀವನದ ಹೀರೋಯಿಸಂನ ಮ್ಯಾಜಿಕ್ ಅನ್ನು ದೊಡ್ಡ ಪರದೆಯ ಮೇಲೆ ಅನುಭವಿಸಿ! ಭಾರತ ಭಾಗ್ಯ ವಿಧಾತ, ಹಾಡದ ನಾಯಕರಿಗೆ ಸಿನಿಮೀಯ ಗೌರವವನ್ನು ನೀಡಲು ಸಂತೋಷವಾಗಿದೆ. ಈ ಶಿರ್ಷಿಕೆಯು ಸಿನಿಮಾದ ಮೂಲಕ ಸ್ಪೂರ್ತಿದಾಯಕ ಕಥೆಗಳಿಗೆ ಜೀವ ತುಂಬುವ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

CBFC ಪ್ರಮಾಣೀಕರಣವನ್ನು ಪಡೆಯಲು ಸಾಕಷ್ಟು ಸವಾಲುಗಳು ಎದುರಾಗಿರುವ ಎಮರ್ಜೆನ್ಸಿ ಸಿನಿಮಾ ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್​ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಸೆಪ್ಟೆಂಬರ್​​ 6ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತಿತ್ತು. ಆದರೀನ್ನು ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net