

ವಿಜಯವಾಡ, ಆಂಧ್ರಪ್ರದೇಶ: ತಮಿಳು ಚಿತ್ರರಂಗದ ಸ್ಟಾರ್ ಹೀರೋ ಕಮಲ್ ಹಾಸನ್ ಇಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ದಿಗ್ಗಜ ನಟ ಘಟ್ಟಮನೇನಿ ಕೃಷ್ಣ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ದಿವಂಗತ ನಟ ಸೂಪರ್‌ಸ್ಟಾರ್ ಕೃಷ್ಣ ಅವರ ಬಹುಗಾತ್ರದ ಪ್ರತಿಮೆಯನ್ನು ತಮಿಳಿನ ಖ್ಯಾತ ನಟ, ಚಲನಚಿತ್ರ ನಿರ್ಮಾಪಕ ಕಮಲ್ ಹಾಸನ್ ಇಂದು ಬೆಳಗ್ಗೆ ವಿಜಯವಾಡದಲ್ಲಿ ಅನಾವರಣಗೊಳಿಸಿದರು. ತಮ್ಮ 'ಇಂಡಿಯನ್ 2' ಚಿತ್ರೀಕರಣಕ್ಕೆ ತೆರಳುವ ಮುನ್ನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಅನಾವರಣಗೊಳಿಸಿದರು.
ಸೂಪರ್‌ಸ್ಟಾರ್ ಕೃಷ್ಣ ಅವರ ಪ್ರತಿಮೆಯನ್ನು ಉದ್ಘಾಟಿಸಿ ಮಾತನಾಡಿದ ನಟ ಕಮಲ್ ಹಾಸನ್, "ಸೂಪರ್ ಸ್ಟಾರ್ ಕೃಷ್ಣ ಅವರು ತಮ್ಮ ಡೇರಿಂಗ್ ಮತ್ತು ಡ್ಯಾಶಿಂಗ್ ಆಕ್ಷನ್‌ಗಳ ಮೂಲಕ ಪರದೆಯ ಮೇಲೆ ಮತ್ತು ಹೊರಗೆ ಸ್ಥಾಪಿಸಿದ ಟ್ರೆಂಡ್‌ಗಳು ಇಂದಿಗೂ ಅಮರ. ಅವರು ರೀಲ್ ಮತ್ತು ರಿಯಲ್ ಲೈಫ್ನ ನಿಜವಾದ ಹೀರೋ" ಎಂದು ಹೇಳಿದರು,(ಏಜೆನ್ಸೀಸ್).