More

    ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿ ಕರ್ತವ್ಯ ನಿಷ್ಠೆ ಮೆರೆದ ಮುಂಬೈ ಪೊಲೀಸರು

    ಮುಂಬೈ: ಇಲ್ಲಿನ ಕುರ್ಲಾ ಪ್ರದೇಶದ ರಸ್ತೆಯೊಂದರಲ್ಲಿ 30 ವರ್ಷದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ನವಜಾತ ಶಿಶುವನ್ನು ಹತ್ತಿರದ ಸಿವಿಲ್ ಅಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ವಿವರಗಳನ್ನು ಹಂಚಿಕೊಂಡ ಮುಂಬೈನ ವಿಬಿ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಕಮಾನಿ ಜಂಕ್ಷನ್ ಬಳಿಯ ರಸ್ತೆಯೊಂದರಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದೆ ಎಂದು ತಿಳಿಸಿದ್ದಾರೆ.

    ಹೆರಿಗೆಯ ಸುದ್ದಿಯನ್ನು ತಿಳಿದುಕೊಂಡ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ, ಮಹಿಳೆ ಮತ್ತು ಶಿಶುವನ್ನು ಬಿಎಂಸಿ ಆಸ್ಪತ್ರೆಗೆ ದಾಖಲಿಸಿದೆ. ಮಹಿಳೆಯನ್ನು ಸುವರ್ಣ ಮಿರ್ಗಲ್ ಎಂದು ಗುರುತಿಸಲಾಗಿದೆ. ಇವರು ಕಮಾನಿ ಜಂಕ್ಷನ್ ಬಳಿಯ ಬೀದಿಯಲ್ಲಿ ನವಜಾತ ಶಿಶುವಿಗೆ ಹೆರಿಗೆಯಾದ ಕೂಡಲೇ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನಮಗೆ ಹೆರಿಗೆಯ ಸುದ್ದಿ ಬಂದ ತಕ್ಷಣ ನಿರ್ಭಯಾ ಪಾಠಕ್​​ ಪೊಲೀಸರ ನೇತೃತ್ವದ ಸ್ಕ್ವಾಡ್​​​ ಸ್ಥಳಕ್ಕಾಗಮಿಸಿ ಮಹಿಳೆ ಮತ್ತು ಆಕೆಯ ನವಜಾತ ಶಿಶುವನ್ನು ಹತ್ತಿರದ ಬಿಎಂಸಿ ಅಸ್ಪತ್ರೆಗೆ ದಾಖಲಿಸಿದರು. ತಾಯಿ ಮತ್ತು ಮಗು ಇಬ್ಬರೂ ಸಕಾಲಿಕ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ.

    ನಿರ್ಭಯಾ ಪಾಠಕ್‌ 

    ನಿರ್ಭಯಾ ಪಾಠಕ್‌ ಮುಂಬೈ ಪೊಲೀಸರ ವಿಶೇಷ ಸ್ಕ್ವಾಡ್​​​ ಅನ್ನು ಮುನ್ನಡೆಸುತ್ತದೆ. ಸ್ಕ್ವಾಡ್​​​ ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟುವ ಕೆಲಸವನ್ನು ನಿರ್ವಹಿಸುತ್ತದೆ. ಸ್ಕ್ವಾಡ್​​​, ತರಬೇತಿ ಪಡೆದ ಮಹಿಳಾ ಪೊಲೀಸ್ ಸಿಬ್ಬಂದಿ ಒಳಗೊಂಡಿದ್ದು, ಅವರು ನಿಯಮಿತವಾಗಿ ಗಸ್ತು ತಿರುಗುತ್ತಾರೆ. ಲೈಂಗಿಕ ಕಿರುಕುಳ, ಹಿಂಬಾಲಿಸುವುದು, ಅತ್ಯಾಚಾರ ಮತ್ತು ಆಸಿಡ್ ದಾಳಿಯಂತಹ ಅಪರಾಧಗಳನ್ನು ತಡೆಯುವ ಕಾರ್ಯವನ್ನು ಸ್ಕ್ವಾಡ್ ಹೊಂದಿದೆ. ಅಂಧೇರಿಯ (ಪೂರ್ವ) ಸಾಕಿ ನಾಕಾದಲ್ಲಿ ಅತ್ಯಾಚಾರ ವರದಿಯಾದ ನಂತರ 2021 ರಲ್ಲಿ ಸ್ಕ್ವಾಡ್ ರಚಿಸಲಾಯಿತು.

    ಕಳೆದ ಒಂಬತ್ತು ವರ್ಷಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಒದಗಿಸಿದ ಭಾರತೀಯ ರೈಲ್ವೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts