More

    ತೆಲುಗಿನ ಡೆವಿಲ್‌ ಸಿನಿಮಾ ಒಟಿಟಿಗೆ ಎಂಟ್ರಿ: ಎಲ್ಲಿ ಸ್ಟ್ರೀಮ್? ಮಾಹಿತಿ ಇಲ್ಲಿದೆ..

    ಹೈದರಾಬಾದ್​: ತೆಲುಗಿನಲ್ಲಿ ಡೆವಿಲ್ ಚಿತ್ರ ಕಳೆದ ವರ್ಷವಷ್ಟೇ ತೆರೆಕಂಡಿದ್ದು, ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಕಲ್ಯಾಣ್ ರಾಮ್ ಅಭಿನಯದ ಈ ಪಿಡಿಯಾಡಿಕ್‌ ಆಕ್ಷನ್ ಡ್ರಾಮಾ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲಿ ಸ್ಟ್ರೀಮ್ ಆಗುತ್ತಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು? ಇಲ್ಲಿದೆ ಮಾಹಿತಿ.

    ಇದನ್ನೂ ಓದಿ: ‘ಬೋಲೋ ಜೈ ಶ್ರೀ ರಾಮ್’: ಪಾಕ್​ ಮಾಜಿ ಕ್ರಿಕೆಟಿಗನ ಟ್ವೀಟ್ ವೈರಲ್..
    ‘ಡೆವಿಲ್; ದಿ ಬ್ರಿಟಿಷ್ ಸೀಕ್ರೆಟ್ ಏಜೆಂಟ್’ ಚಿತ್ರವು ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿತ್ತು. ಟೀಸರ್ ಮತ್ತು ಟ್ರೇಲರ್ ಬಳಿಕ ಚಿತ್ರದ ಮೇಲೆ ಅಪಾರ ನಿರೀಕ್ಷೆ ಮೂಡಿತ್ತು. ಅದರಂತೆ ಡಿಸೆಂಬರ್ ಸಿನಿಮಾ ಡಿಸೆಂಬರ್‌ 29 ರಂದು ಚಿತ್ರಮಂದಿರಕ್ಕೆ ಆಗಮಿಸಿತ್ತು. ಪಾಸಿಟಿವ್‌ ಪ್ರತಿಕ್ರಿಯೆ ಪಡೆದರೂ, ಕೇವಲ 15 ದಿನಗಳಿಗೆ ಸಿನಿಮಾ ಒಟಿಟಿಗೆ ಎಂಟ್ರಿಕೊಟ್ಟಿದೆ.
    ಅಂದಹಾಗೆ ಡೆವಿಲ್ ಸಿನಿಮಾ ಜ.14ರಿಂದ ಅಮೆಜಾನ್ ಪ್ರೈಮ್ ವೀಡಿಯೊ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಈ ಸಿನಿಮಾವನ್ನು ಮೂಲ ತೆಲುಗು ಮತ್ತು ತಮಿಳಿನಲ್ಲಿ ವೀಕ್ಷೀಸಬಹುದು. ಚಿತ್ರದಲ್ಲಿ ಕಲ್ಯಾಣ್ ರಾಮ್‌ಗೆ ಜೋಡಿಯಾಗಿ ಸಂಯುಕ್ತಾ ಮೆನನ್ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣ್ ರಾಮ್‌ಗೆ ಜೋಡಿಯಾಗಿ ಸಂಯುಕ್ತಾ ಮೆನನ್ ನಾಯಕಿಯಾಗಿದ್ದಾರೆ.

    ಕೊಲೆಯ ರಹಸ್ಯ ಆಪರೇಷನ್ ಟೈಗರ್ ಹಂಟ್ ಸುತ್ತ ಇಡೀ ಸಿನಿಮಾ ಸುತ್ತುತ್ತದೆ. ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಲ್ಲಿ ಈ ಚಿತ್ರ ತೆರೆದುಕೊಳ್ಳುತ್ತದೆ. ಅಭಿಷೇಕ್ ನಾಮಾ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.

    ಚಿತ್ರದಲ್ಲಿ ಮಾಳವಿಕಾ ನಾಯರ್, ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಮತ್ತು ಎಲ್ನಾಜ್ ನೊರೌಜಿ ಪ್ರಮುಖ ಪಾತ್ರಗಳನ್ನು ನಟಿಸಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

    ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದಮುಟ್ಟಿ ಬಿಗಿದಪ್ಪಿದ ಅಭಿಮಾನಿ: ಕಡೆಗೆ ಏನಾಯ್ತು?

    to

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts