

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಶಿಕ್ಷಕರ ಕಲೋತ್ಸವ ಕಾಸರಗೋಡು ಬೀರಂತಬೈಲು ಅಧ್ಯಾಪಕ ಭವನದಲ್ಲಿ ಜರುಗಿತು. ನಿವೃತ್ತ ಅಧ್ಯಾಪಕ ಕೃಷ್ಣೋಜಿ ರಾವ್ ಪುಂಡೂರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಸಂಘಟನೆ ಕೇಂದ್ರ ಸಮಿತಿ ಅಧ್ಯಕ್ಷ ನಿವಾಸ್ ರಾವ್ ಪಿ.ಬಿ.ಅಧ್ಯಕ್ಷತೆ ವಹಿಸಿದ್ದರು.
ಶೇಖರ ಶೆಟ್ಟಿ ಬಾಯಾರು, ರಾಧಾಕೃಷ್ಣ ಬಲ್ಲಾಳ್, ವಂದನಾ ಉಳ್ಳೋಡಿ, ಶ್ರೀಪತಿ ಭಟ್ ಪದ್ಯಾಣ, ವೆಂಕಟ್ ಭಟ್ ಎಡನೀರು ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಜಬ್ಬಾರ್ ನಿರೂಪಿಸಿದರು. ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.