ಕಾರವಾರ: ನಗರದಿಂದ ಗೋವಾ ಸಂಪರ್ಕಿಸುವ ಕಾಳಿ ಸೇತುವೆ ಕುಸಿದು ಬಿದ್ದಿದ್ದು, ಲಾರಿಯೊಂದು ಅದರಲ್ಲಿ ಸಿಲುಕಿಕೊಂಡಿದೆ.
ಮಂಗಳವಾರ ರಾತ್ರಿ 1ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ.ಕಾರವಾರ ಕಡೆಯಿಂದ ಒಂದು ಪಿಲ್ಲರ್ ಕುಸಿದು ಬಿದ್ದಿದೆ.ಘಟನೆಯಲ್ಲಿ ನದಿಗೆ ಒಂದು ಲಾರಿ ಬಿದ್ದಿದೆ. ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ನೀರಿನಲ್ಲಿ ಎಷ್ಟು ಜನ ಸಿಲುಕಿದ್ದಾರೆ ಎಂಬ ಮಾಹಿತಿ ಇಲ್ಲ. ಪೊಲೀಸ್ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ ಸದಾಶಿವಗಡ ನಡುವೆ ಕಾಳಿ ನದಿಗೆ ಎರಡು ಸೇತುವೆಗಳಿದ್ದವು. ಈಗ ಹಳೆಯ ಸೇತುವೆ ಕುಸಿತವಾಗಿದೆ. ಅದು ಸುಮಾರು 30.ವರ್ಷಗಳಷ್ಟು ಹಳೆಯದಾಗಿದೆ.
ಕೆಲ ವರ್ಷಗಳ ಹಿಂದೆ ಚತುಷ್ಪತಯ ವಿಸ್ತರಣೆ ಭಾಗವಾಗಿ ಎರಡನೇ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದರಿಂದ ಹೆದ್ದಾರಿ ಸಂಚಾರಕ್ಕೆ ವ್ಯತ್ಯಯವಾಗಿಲ್ಲ.