ದಾವಣಗೆರೆ : ಪ್ರಶ್ನೆಪತ್ರಿಕೆಯಲ್ಲಿ ನ್ಯೂನತೆ ಕಂಡುಬಂದ ಹಿನ್ನೆಲೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಮಂಗಳವಾರ ನಿಗದಿಯಾಗಿದ್ದ ಬಿ.ಕಾಂ ಪದವಿಯ 6ನೇ ಸೆಮಿಸ್ಟರ್ ಇ-ಕಾಮರ್ಸ್ ವಿಷಯದ ಪರೀಕ್ಷೆಯನ್ನು ರದ್ದುಪಡಿಸಿ ಮುಂದೂಡಲಾಯಿತು. ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡುವ ಬದಲು ‘ಸ್ಕೀಂ ಆಫ್ ವ್ಯಾಲುಯೇಷನ್’ ಅನ್ನು ನೀಡಲಾಗಿತ್ತು. ಅದರಲ್ಲಿ 10 ಅಂಕಗಳಿಗೆ ಉತ್ತರಗಳನ್ನೂ ಬರೆಯಲಾಗಿತ್ತು!. ಈ ಎಡವಟ್ಟು ತಿಳಿಯುತ್ತಿದ್ದಂತೆಯೇ ವಿವಿ ಅಧಿಕಾರಿಗಳು ಪರೀಕ್ಷೆಯನ್ನು ರದ್ದುಪಡಿಸಿ ಮುಂದೂಡಿದರು. ವಿವಿ ವ್ಯಾಪ್ತಿಯ 15 ಕಾಲೇಜುಗಳಲ್ಲಿ ಈ ಬೆಳವಣಿಗೆ ನಡೆದಿದೆ. ಬೆಳಗ್ಗೆ ಇ-ಕಾಮರ್ಸ್ ವಿಷಯದ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಕವರ್ ತೆರೆದಾಗ ಪ್ರಶ್ನೆಪತ್ರಿಕೆಯ ಬದಲು ಅದರಲ್ಲಿ ಸ್ಕೀಂ ಆಫ್ ವ್ಯಾಲುಯೇಷನ್ ಪತ್ರಿಕೆಗಳು ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಪರೀಕ್ಷಾ ಸಿಬ್ಬಂದಿ ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ‘ಪರೀಕ್ಷಾ ಮಂಡಳಿ(ಕಾಮರ್ಸ್)ಯಿಂದ ಲೋಪವಾಗಿದೆ. ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ.ಕೆ. ರಮೇಶ್ ಪ್ರತಿಕ್ರಿಯೆ ನೀಡಿದರು. ಬಿಬಿಎ ಪರೀಕ್ಷೆಯಲ್ಲಿ 50 ಅಂಕಗಳಿಗೆ ಇರಬೇಕಾಗಿದ್ದ ಪ್ರಶ್ನೆಪತ್ರಿಕೆಯನ್ನು 60 ಅಂಕಗಳಿಗೆ ಸಿದ್ಧಪಡಿಸಲಾಗಿತ್ತು ಎಂಬ ಮಾಹಿತಿ ಇದೆ, ಖಚಿತವಾಗಿಲ್ಲ. ಅದರ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕುಲಸಚಿವರು ತಿಳಿಸಿದರು. … * ಆಗಿರುವುದು ಏನು? ಇ-ಕಾಮರ್ಸ್ ವಿಷಯದ ಪರೀಕ್ಷೆಗೆ ಪ್ರಶ್ನೆಪತ್ರಿಕೆಗಳನ್ನು ರೂಪಿಸುವ ಜವಾಬ್ದಾರಿಯನ್ನು ವಿಷಯವಾರು ಹಿರಿಯ ಅಧ್ಯಾಪಕರಿಗೆ ವಹಿಸಲಾಗಿರುತ್ತದೆ. ಅವರು ಪ್ರಶ್ನೆಪತ್ರಿಕೆಯನ್ನು ರೂಪಿಸುವ ಜತೆಗೆ ಮೌಲ್ಯಮಾಪನ ಹೇಗೆ ಮಾಡಬೇಕು ಎನ್ನುವುದಕ್ಕೆ ಒಂದು ಚೌಕಟ್ಟು (ಸ್ಕೀಂ ಆಫ್ ವ್ಯಾಲುಯೇಷನ್) ನಿಗದಿಪಡಿಸುತ್ತಾರೆ. ವಿವಿಯ ಪರೀಕ್ಷಾ ಮಂಡಳಿಯಿಂದ ಅವುಗಳು ಪರಿಶೀಲನೆಗೆ ಒಳಪಡುತ್ತವೆ. ಅದಾದ ನಂತರ ಪ್ರಶ್ನೆಪತ್ರಿಕೆಗಳು ಹಾಗೂ ಸ್ಕೀಂ ಆಫ್ ವ್ಯಾಲುಯೇಷನ್‌ನ ಪ್ರತ್ಯೇಕ ಬಂಡಲ್ ಮಾಡಿ ನಂತರ ಮುದ್ರಣಕ್ಕೆ ಕಳಿಸಲಾಗುತ್ತದೆ. ಆ ಹಂತದಲ್ಲಿ ಅದಲು ಬದಲು ಆಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪ್ರಶ್ನೆಪತ್ರಿಕೆಯಲ್ಲೇ ಉತ್ತರಗಳೂ ಪ್ರಕಟ!
ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars
Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…
ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream
Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…
ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items
Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…