ಕಾಜಲ್ VS ಸಮಂತಾ: ಇನ್​ಸ್ಟಾಗ್ರಾಂನಲ್ಲಿ ಅನುಯಾಯಿಗಳ ವಿಚಾರದಲ್ಲಿ ಪೈಪೋಟಿ! ಹೆಚ್ಚು ಹವಾ ಯಾರದ್ದು?

Published on
ತಾಯಿಯಾಗಲಿರುವ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ 21 ಮಿಲಿಯನ್ ಅನುಯಾಯಿಗಳನ್ನು ಸಂಪಾದಿಸಿದ್ದಾರೆ. ಈ ಖುಷಿಯಲ್ಲಿ ನಟಿ ಕಾಜಲ್ ಅವರ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಕಾಜಲ್ ಅವರ ಒಂದು ಥ್ರೋಬ್ಯಾಕ್ ಫೋಟೋಶೂಟ್‌ನ ಚಿತ್ರಗಳನ್ನು ಪೋಸ್ಟ್ ಮಾಡಿ ''ನನ್ನ ಇನ್‌ಸ್ಟಾದ 21 ಮಿಲಿಯನ್ ಅನುಯಾಯಿಗಳ ಕುಟುಂಬಕ್ಕೆ ಧನ್ಯವಾದಗಳು. ನಾನು ನಿಮ್ಮನ್ನು 21 ಮಿಲಿಯನ್ ಬಾರಿ ಪ್ರೀತಿಸುತ್ತೇನೆ!'' ಎಂಬ ಕ್ಯಾಪ್ಷನ್ ನೀಡಿದ್ದಾರೆ. ಆದರೆ, ಇಲ್ಲಿ ಗಮನಿಸುವ ವಿಷಯವೆಂದರೆ, ನಟಿ ಸಮಂತಾ ಅವರು ನಟಿ ಕಾಜಲ್ ಜತೆ ಸಿಕ್ಕಾಪಟ್ಟೆ ಕಾಂಪಿಟ್ ಮಾಡುತ್ತಿದ್ದಾರೆ. ಯಾವುದಕ್ಕೆ ಅಂತೀರಾ?.
ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಇನ್​ಸ್ಟಾಗ್ರಾಂ ಫಾಲೋವರ್ಸ್ ಪಡೆದಿರುವ ನಟಿಮಣಿಯರ ಪಟ್ಟಿಯಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರ ಹೆಸರು ಮೊದಲ ಸ್ಥಾನದಲ್ಲಿದೆ. ಬರೋಬ್ಬರಿ 29 ಮಿಲಿಯನ್ ಅನುಯಾಯಿಗಳನ್ನು ಪಡೆದಿರುವ ನಟಿ ರಶ್ಮಿಕಾ ಅವರು 30 ಮಿಲಿಯನ್ನತ್ತ ಹೆಜ್ಜೆ ಹಾಕುತ್ತಿದ್ದು, ಇನ್​ಸ್ಟಾಗ್ರಾಂನಲ್ಲಿ ಅವರದ್ದೇ ಹವಾ. ಹಾಗಾದರೆ, ನಟಿ ಸಮಂತಾ ಮತ್ತು ನಟಿ ಕಾಜಲ್ ನಡುವೆ ಯಾಕೆ ಪೈಪೋಟಿ ಅಂತೀರಾ?. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಇನ್​ಸ್ಟಾಗ್ರಾಂ ಫಾಲೋವರ್ಸ್ ಪಡೆದಿರುವ ನಟಿಮಣಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ನಟಿ ರಶ್ಮಿಕಾಗೆ ಸಿಕ್ಕರೆ, ಎರಡನೇ ಸ್ಥಾನಕ್ಕೆ ಸಮಂತಾ ಮತ್ತು ಕಾಜಲ್ ನಡುವೆ ಸಿಕ್ಕಾಪಟ್ಟೆ ಕಾಂಪಿಟಿಷನ್ ಇದೆ. ಹೌದು, ತಮ್ಮ ವಿಚ್ಛೇದನ ಬಳಿಕ 19 ಮಿಲಿಯನ್ ಇದ್ದ ಫಾಲೋವರ್ಸ್​ಗಳನ್ನು 21 ಮಿಲಿಯನ್ ಮಾಡಿಕೊಂಡ ನಟಿ ಸಮಂತಾ ಡಿಸೆಂಬರ್ ತಿಂಗಳಲ್ಲಿ ಬಹಳಷ್ಟು ಸುದ್ದಿಯಲ್ಲಿದ್ದರು.
ಅಲ್ಲಿಯವರೆಗೆ, ನಟಿ ಕಾಜಲ್ ಅವರು 20 ಮಿಲಿಯನ್ ಫಾಲೋವರ್ಸ್ ಇದ್ದು ಎರಡನೇ ಸ್ಥಾನದಲ್ಲಿದ್ದರು. ಆದರೆ, ಸಮಂತಾ ಅವರು ಡಿಸೆಂವರ್ ನಂತರ ಎರಡನೇ ಸ್ಥಾನ ಗಿಟ್ಟಿಸಿಕೊಂಡರು. ಈಗ, ನಟಿ ಕಾಜಲ್​ಗೆ 21 ಮಿಲಿಯನ್ ಫಾಲೋವರ್ಸ್ ಇದ್ದು, ಸಮಂತಾ ಅವರಿಗೆ 21.8 ಫಾಲೋವರ್ಸ್ ಇದ್ದಾರೆ. ಹೀಗಾಗಿ, ಎರಡನೇ ಸ್ಥಾನಕ್ಕೆ ಇವರಿಬ್ಬರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದೇ ಹೇಳಬೇಕು. ಹಾಗಾಗಿ, ಯಾವಾಗ ಬೇಕಂದರೂ ಏನು ಬೇಕಾದರು ಆಗಬಹುದು, ತಮ್ಮ ನೆಚ್ಚಿನ ನಟಿ ಎರಡನೇ ಸ್ಥಾನಕ್ಕೆ ಬರಬಹುದು ಎಂಬುದು ಇಬ್ಬರೂ ನಟಿಯರ ಅಭಿಮಾನಿಗಳ ವಾದವಾಗಿದೆ. ಇನ್ನು, ಈ ಇಬ್ಬರು ನಟಿಯರನ್ನು ಇದೇ ಪಟ್ಟಿಯಲ್ಲಿ ಹಿಂಬಾಲಿಸುತ್ತಿರುವವರು, ನಾಲ್ಕನೇ ಸ್ಥಾನದಲ್ಲಿರುವ ನಟಿ ಶ್ರುತಿ ಹಾಸನ್. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net