ಮದ್ಯ ಸೇವಿಸಿ ವಾಹನ ಚಲಾಯಿಸಿದ ಪ್ರಕರಣ, ಅಪಘಾತ ಮಾಡಿದ ಪ್ರಕರಣ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಅಧಿಕಾರಿಗಳಿಗೆ ಕರ್ತವ್ಯ ಮಾಡಲು ಅಡ್ಡಿಪಡಿಸಿದ್ದು ಹೀಗೆ ಹಲವು ದೂರುಗಳನ್ನು ಬೇರೆ ಬೇರೆ ಸೆಕ್ಷನ್ಗಳ ಅಡಿ ಕಾವ್ಯಾ ಅವರ ವಿರುದ್ಧ ದಾಖಲಿಸಲಾಗಿದೆ. ಮುಂಬೈನವರಾಗಿರುವ ಕಾವ್ಯಾ ತಾಪರ್ ನಟಿಸಿರುವುದು ಮಾತ್ರ ತೆಲುಗು, ತಮಿಳು ಚಿತ್ರಗಳಲ್ಲಿ. ತೆಲುಗಿನಲ್ಲಿ 'ಒಕ ಮಿನಿ ಕಥಾ', 'ಈ ಮಾಯ ಪೇರೇಮಿಟೊ' ಹಾಗೂ ತಮಿಳಿನಲ್ಲಿ 'ಮಾರ್ಕೆಟ್ ರಾಜ ಎಂಬಿಬಿಎಸ್' ಎಂಬ ಸಿನಿಮಾಗಳ ಮೂಲಕ ಹೆಸರು ಮಾಡಿದ್ದಾರೆ. ಈಗ, ಮತ್ತೊಂದು ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.