

ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರದಲ್ಲಿ ಕಾಜಲ್ ಅಗರವಾಲ್ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಲೇ ಇದೆ. ಆದರೆ, ಚಿತ್ರತಂಡ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡದಿರುವುದರಿಂದ, ಸದ್ಯಕ್ಕೆ ವೇಯ್್ಟ ಆಂಡ್ ಸೀ ಮಾಡುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಈ ಮಧ್ಯೆ, ಕಾಜಲ್ ಅಗರವಾಲ್ ವಿಷಯದಲ್ಲಿ ಇನ್ನೊಂದು ಸುದ್ದಿ ಕೇಳಿಬಂದಿದೆ. ಅದೇನೆಂದರೆ, ಕಾಜಲ್ಗೆ ಕಂಕಣ ಬಲ ಕೂಡಿಬಂದಿದ್ದು, ಸದ್ಯದಲ್ಲೇ ಗೌತಮ್ ಎನ್ನುವವರನ್ನು ಮದುವೆಯಾಗಲಿದ್ದಾರಂತೆ. ಅಷ್ಟೇ ಅಲ್ಲ, ಇತ್ತೀಚೆಗೆ ಸದ್ದಿಲ್ಲದೆ ಅವರ ನಿಶ್ಚಿತಾರ್ಥ ಸಹ ಮುಗಿದಿದೆ ಎಂದು ಹೇಳಲಾಗುತ್ತಿದೆ.
ಹೈದರಾಬಾದ್ನಲ್ಲಿ ನಿಶ್ಚಿತಾರ್ಥವಾದರೆ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಮುಂಬೈನಲ್ಲಿ ಸದ್ದಿಲ್ಲದೆ ಎಂಗೇಜ್ವೆುಂಟ್ ಮುಗಿಸಲಾಗಿದೆಯಂತೆ. ಈ ನಿಶ್ಚಿತಾರ್ಥದಲ್ಲಿ ತೆಲುಗು ಚಿತ್ರರಂಗದ ಪೈಕಿ ನಟ ಬೆಲ್ಲಮಕೊಂಡ ಸಾಯಿ ಶ್ರೀನಿವಾಸ್ ಒಬ್ಬರು ಹಾಜರಾಗಿದ್ದು ಬಿಟ್ಟರೆ, ಮಿಕ್ಕಂತೆ ಯಾರಿಗೂ ಮಾಹಿತಿ ಸಹ ಇರಲಿಲ್ಲವಂತೆ. ಅಷ್ಟೊಂದು ರಹಸ್ಯವಾಗಿ ಈ ನಿಶ್ಚಿತಾರ್ಥ ಮಾಡಲಾಗಿದೆಯಂತೆ.
ತಮ್ಮ ಬಗ್ಗೆ ಇಷ್ಟೆಲ್ಲ ಸುದ್ದಿಗಳು ಹರಡಿದ್ದರೂ, ಕಾಜಲ್ ಮಾತ್ರ ಇದುವರೆಗೂ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದೆ ತಮಗೇನೂ ಗೊತ್ತಿಲ್ಲ ಎನ್ನುವಂತೆ ಸುಮ್ಮನಿದ್ದುಬಿಟ್ಟಿದ್ದಾರೆ. ‘ಮೌನಂ ಸಮ್ಮತಿ ಲಕ್ಷಣಂ’ ಎಂಬ ಮಾತಿನಂತೆ, ಕಾಜಲ್ ಮೌನ ನೋಡಿ ಇದು ನಿಜ ಇರಬಹುದಾ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಯಾವಾಗ ಕೊಡುತ್ತಾರೆ ಕಾಜಲ್? ಕಾದು ನೋಡಬೇಕಿದೆ.