ಐಷಾರಾಮಿ ಹೊಸ ಮನೆ ಪ್ರವೇಶಿಸಿದ ನಟಿ ಕಾಜಲ್​ ಅಗರ್ವಾಲ್; 'ಗೃಹ ಪ್ರವೇಶ' ದ ಪೋಟೋ ಶೇರ್​

kkkkk
Published on

ಕಾಜಲ್​​ ಅಗರ್ವಾಲ್​ ಇದೀಗ ಹೊಸ ಮನೆಗೆ ಶಿಫ್ಟ್​​​ ಆಗಿದ್ದಾರೆ. ಕಾಜಲ್ ಅಗರ್ವಾಲ್ ಪತಿ ಗೌತಮ್ ಕಿಚ್ಲು ಅವರೊಂದಿಗೆ ಅಕ್ಟೋಬರ್ 30, 2020 ರಂದು ಮದುವೆಯಾಗಿದ್ದಾರೆ. ನಂತರ, ಏಪ್ರಿಲ್ 19, 2022 ರಂದು ದಂಪತಿಗಳು ತಮ್ಮ ಮೊದಲ ಮಗು ನೀಲ್ ಕಿಚ್ಲು ಆಗಮನವನ್ನು ಘೋಷಿಸಿದರು.


ಕಾಜಲ್​ ಅಗರ್ವಾಲ್​​ ಯಾವಗಲೂ ತಮ್ಮ ಮಕ್ಕಳು ಮತ್ತು ತಮ್ಮ ಹೊಸ ಚಲನಚಿತ್ರದ ಪ್ರತಿಯೊಂದೂ ಅಪ್ಡೇಟನ್ನೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರ್ತಾರೆ.


ಅಂತೆಯೇ ಇದೀಗ ತಾವು ಹೊಸ ಮನೆಗೆ ಗೃಹ ಪ್ರವೇಶಿಸಿದ ಫೋಟೋಗಳನ್ನ ಹಂಚಿಕೊಮಡಿದ್ದು, ಅಭಿಮಾನಿಗಳು ಕಾಜಲ್​ಗೆ ಶುಭಾಶಯಗಳನ್ನ ಕೋರಿದ್ದಾರೆ.


ನಟಿ ಇತ್ತೀಚೆಗೆ ತನ್ನ ಪತಿ ಗೌತಮ್ ಮತ್ತು ಮಗ ನೀಲ್ ಅವರೊಂದಿಗೆ ಹೊಸ ಮನೆಗೆ ಸ್ಥಳಾಂತರಗೊಂಡಿದ್ದು, ಅರ್ಚಕರು ಕುಟುಂಬದ ಸುಖ ಶಾಂತಿಗಾಗಿ ಪೂಜೆ ಸಲ್ಲಿಸಿದ್ದಾರೆ.


ಪೂಜೆಗಾಗಿ, ಕಾಜಲ್ ಅಗರ್ವಾಲ್ ಹಳದಿ ಬಣ್ಣದ ಸಲ್ವಾರ್ ಮತ್ತು ಗುಲಾಬಿ ಬಣ್ಣದ ದುಪಟ್ಟಾದೊಂದಿಗೆ ಬೇಬಿ ಪಿಂಕ್-ಹ್ಯೂಡ್ ಸೂಟ್ ಅನ್ನು ಧರಿಸಿದ್ದರು.
ಪೋನಿಟೇಲ್‌ನಲ್ಲಿ ತನ್ನ ಕೂದಲನ್ನು ಕಟ್ಟಿಕೊಂಡು, ಕಾಜಲ್​ ಲೈಟ್​​ ಮೇಕಪ್​ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ಗೌತಮ್ ಹಳದಿ ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮಾದಲ್ಲಿ ಸಖತ್ತಾಗಿ ಕಾಣಿಸಿದ್ದಾರೆ. ಮಗ ನೀಲ್, ಗುಲಾಬಿ ಕುರ್ತಾದಲ್ಲಿ ಸ್ಟೈಲಿಶ್​​​ ಲುಕ್​ನಲ್ಲಿ ಮಿಂಚಿದ್ದಾನೆ.


ಕಾಜಲ್ ತನ್ನ ಕುಟುಂಬದೊಂದಿಗೆ ಹೊಸ ಮನೆಯನ್ನು ಪ್ರವೇಶಿಸಿದ್ದು, ಕಾಜಲ್ ತನ್ನ ಪತಿ ಗೌತಮ್ ಅವರೊಂದಿಗೆ ಹೊಸ ಮನೆಯನ್ನು ಖರೀದಿಸಿದ ಬಗ್ಗೆ ಮಾತನಾಡುತ್ತಾ ಸಂತೋಷ ವ್ಯಕ್ತ ಪಡಿಸಿದ್ದಾರೆ.
ನೀಲ್ ಅವರ ಮೊದಲ ಹುಟ್ಟುಹಬ್ಬದಂದು ಕಾಜಲ್ ಅಗರ್ವಾಲ್ ಮೊದಲ ಬಾರಿಗೆ ತನ್ನ ಮಗನ ಫೋಟೋವನ್ನ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net