ಕಾಜಲ್​ ಅಗರವಾಲ್​ ಮದುವೆ ಫಿಕ್ಸ್​ ಆಯ್ತಾ? ಟಾಲಿವುಡ್​ನಲ್ಲಿ ಗುಸುಗುಸು ...

Kajal Agarwal - Final
Published on

ಕಳೆದ 10 ವರ್ಷಗಳಿಂದ ನಟಿ ಕಾಜಲ್ ಅಗರವಾಲ್​ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ನಟಿ ಎಂದನಿಸಿಕೊಂಡಿದ್ದಾರೆ. ಬರೀ ತೆಲುಗು ಚಿತ್ರರಂಗವಷ್ಟೇ ಅಲ್ಲ, ತಮಿಳು, ಹಿಂದಿಯಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬರೀ ನಟಿಸುವುದಷ್ಟೇ ಅಲ್ಲ, ಎಲ್ಲಾ ಟಾಪ್​ ಹೀರೋಗಳ ಜತೆಗೆ ಕಾಜಲ್​ ನಟಿಸಿರುವುದು ವಿಶೇಷ.

ಈ ಮಧ್ಯೆ, ಕಾಜಲ್​ ವಿಚಾರವಾಗಿ ಒಂದು ಸುದ್ದಿ ಕೇಳಿ ಬರುತ್ತಲೇ ಇದೆ. ಏನು ಸುದ್ದಿ ಅದು ಎಂಬ ಪ್ರಶ್ನೆ ಬಂತಾ? ಮದುವೆ ಸುದ್ದಿ. ಎಲ್ಲಾ ನಟಿಯರಿಗೂ ಒಂದು ಹಂತದ ನಂತರ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಕಾಜಲ್​ ಅಗರವಾಲ್​ ಸಹ ಹೊರತಲ್ಲ.

ಕಾಜಲ್​ಗೂ ಕಳೆದ ನಾಲ್ಕೈದು ವರ್ಷಗಳಿಂದ, 'ಮದುವೆ ಯಾವಾಗ?' ಎಂಬ ಪ್ರಶ್ನೆಗಯನ್ನು ಮಾಧ್ಯಮದವರು, ಚಿತ್ರರಂಗದವರು ಮತ್ತು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಆದರೆ, ಕಾಜಲ್​ ಮಾತ್ರ ಸದ್ಯಕ್ಕಿಲ್ಲ ಎಂಬ ಉತ್ತರವನ್ನು ಕೊಡುತ್ತಲೇ ಬಂದಿದ್ದಾರೆ. 'ಈಗಲೇ ಏನು ಅರ್ಜೆಂಟ್​? ಫಿಕ್ಸ್​ ಆದಾಗ ನಿಮಗೆಲ್ಲಾ ಹೇಳದೇ ಇರುತ್ತೀನಾ?' ಎಂದು ಪ್ರಶ್ನೆ ಹಾಕಿ ಬಾಯಿ ಮುಚ್ಚಿಸುತ್ತಲೇ ಬಂದಿದ್ದಾರೆ.

ಇದೀಗ ಕಾಜಲ್​ ಸದ್ದಿಲ್ಲದೆ ಮದುವೆಯಾಗುತ್ತಿದ್ದಾರೆ ಎಂನ ವಿಷಯ ಟಾಲಿವುಡ್​ನಲ್ಲಿ ಕೇಳಿ ಬರುತ್ತಿದೆ. ಅಷ್ಟೇ ಅಲ್ಲ, ಗೌತಮ್​ ಎನ್ನುವವರ ಜತೆಗೆ ಅವರ ನಿಶ್ಚಿತಾರ್ಥ ಇದೀಗ ಸದ್ದಿಲ್ಲದೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್​ನಲ್ಲಿ ನಿಶ್ಚಿತಾರ್ಥವಾದರೆ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಭಯದಲ್ಲಿ ಮುಂಬೈನಲ್ಲಿ ಸದ್ದಿಲ್ಲದೆ ಎಂಗೇಜ್​ಮೆಂಟ್​ ಮಾಡಲಾಗಿದ್ದು, ಇದರಲ್ಲಿ ತೆಲುಗು ಚಿತ್ರರಂಗದ ಪೈಕಿ ನಟ ಬೆಲ್ಲಮಕೊಂಡ ಸಾಯಿ ಶ್ರೀನಿವಾಸ್​ ಮಾತ್ರ ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಈಗಲೇ ಎಲ್ಲೆಡೆ ಹರಡಿದರೆ, ಎಲ್ಲರೂ ಕೇಳುತ್ತಾರೆ, ಉತ್ತರಿಸುವುದು ಬಹಳ ಕಷ್ಟವಾಗುತ್ತದೆ ಎಂದು ಇದುವರೆಗೂ ಎಂಗೇಜ್​ಮೆಂಟ್​ನ ಫೋಟೋಗಳನ್ನು ಹೊರಗೆ ಬಿಟ್ಟಿಲ್ಲವಂತೆ. ಮದುವೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ, ಕಾಜಲ್​ ಮನೆಯವರೇ ಈ ಎಂಗೇಜ್​ಮೆಂಟ್​ ಫೋಟೊಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net