ಮುಂಬೈ ವಾಲಿಕೇಶ್ವರ ಶಾಖಾ ಮಠದಲ್ಲಿ ಕೈವಲ್ಯಶ್ರೀ ಚಾತುರ್ಮಾಸ್ಯ

Chaturmasya..
ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್.
Published on

ಕಾರ್ಕಳ: ಸಾರಸ್ವತ ಮಠ ಪರಂಪರೆಯ ಆದ್ಯ ಗುರುಪೀಠ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕವಳೆ ಮಠದ 77ನೇ ಪೀಠಾಧಿಪತಿಗಳಾದ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ಅವರು 31ನೇ ಚಾತುರ್ಮಾಸ್ಯ ವ್ರತಾಚರಣೆ ಜು.10ರಿಂದ ಸೆಪ್ಟೆಂಬರ್ 7ರ ವರೆಗೆ ಮುಂಬೈ ವಾಲಿಕೇಶ್ವರದ ಶಾಖಾ ಮಠದಲ್ಲಿ ಕೈಗೊಳ್ಳಲಿದ್ದಾರೆ.

ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಅನುಷ್ಠಾನಗಳು, ಶ್ರಾವಣ ಸೋಮವಾರ, ಲಘುರುದ್ರ ಸ್ವಹಾಕಾರ, ನಾಗಪಂಚಮಿ, ನವಚಂಡಿ ಹವನ, ದೇವಿಸೂಕ್ತ ಹವನ, ಮಹಾರುದ್ರ ಅನುಷ್ಠಾನ, ಪ್ರದೋಷ ಪೂಜಾ, ಮಹಾಲಕ್ಷ್ಮೀ ವ್ರತ, ಕುಂಕುಮಾರ್ಚನೆ, ಋಗುಪಾಕರ್ಮ, ಮಹಾರುದ್ರ ಅನುಷ್ಠಾನ, ಶ್ರೀಕೃಷ್ಣಜನ್ಮಾಷ್ಟಮಿ, ಶ್ರೀಗುರು ಪುಷ್ಯಾಮೃತ ಯೋಗದ ದಿನದಂದು ವಿಶೇಷ ಗುರು ಸುವರ್ಣಪಾದುಕಾ ಪೂಜಾ, ಗಣೇಶ ಚತುರ್ಥಿ, ಅನಂತ ಚತುರ್ದಶಿ ಪೂಜಾ ಕಾರ್ಯಗಳು ನಡೆಯಲಿವೆ. ಸೆ.7ರಂದು ಚಾತುಮಾಸ್ಯ ವ್ರತ ಸಂಪನ್ನಗೊಳ್ಳಲಿದ್ದು, ಸೆ.8ರಂದು ಗಣಪತಿ ಮೂರ್ತಿ ವಿಸರ್ಜನಾ ಪೂಜೆ ನೆರವೇರಲಿದೆ ಎಂದು ಚಾತುರ್ಮಾಸ್ಯ ಸಮಿತಿಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net