ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಸದೃಢ

hbr (5)
Published on

ಹೆಬ್ರಿ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಸದೃಢವಾಗಿದೆ. ಸರ್ಕಾರ ‘ಶಕ್ತಿ’ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿ 500 ಕೋಟಿ ದಾಖಲೆಯ ಮಂದಿ ಪ್ರಯಾಣಿಸಿದ ಸಂಭ್ರಮದಲ್ಲಿದ್ದೇವೆ ಎಂದು ಉಡುಪಿ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮುನಿಯಾಲು ಉದಯಕುವಾರ್ ಶೆಟ್ಟಿ ಹೇಳಿದರು.

ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ವತಿಯಿಂದ ನಗರದ ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಯೋಜನೆ ಸಂಭ್ರಮಾಚರಣೆ ಪ್ರಯುಕ್ತ ‘ಶಕ್ತಿ ನಮ್ಮದು ಸಾಮರ್ಥ್ಯ ನಿಮ್ಮದು 500 ಕೋಟಿ ಪ್ರಯಾಣ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಡ್ ಬಳಿಕ ನಿಂತು ಹೋಗಿದ್ದ ಹೆಬ್ರಿ-ಬ್ರಹ್ಮಾವರ ಉಡುಪಿ ಸರ್ಕಾರಿ ಬಸ್ ಸಂಚಾರಕ್ಕೆ ಮತ್ತೆ ಚಾಲನೆ ನೀಡಲಾಯಿತು. ಹೆಬ್ರಿ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಬ್ರಿ ಶಂಕರ ಶೇರಿಗಾರ್, ಸಮಿತಿ ಸದಸ್ಯರು, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್, ಹೆಬ್ರಿ ಗ್ರಾಪಂ ಸದಸ್ಯ ಎಚ್.ಜನಾರ್ದನ್, ವಿವಿಧ ಮುಖಂಡರಾದ ನವೀನ್ ಕೆ.ಅಡ್ಯಂತಾಯ, ಕಬ್ಬಿನಾಲೆ ಚಂದ್ರಶೇಖರ ಬಾಯರಿ, ವರಂಗ ಲಕ್ಷ್ಮಣ ಆಚಾರ್, ಶಶಿಕಲಾ ಆರ್.ಪಿ., ರಾಜೇಶ ಆಚಾರ್ಯ ಮಠದಬೆಟ್ಟು, ಹರೀಶ ಶೆಟ್ಟಿ ನಾಡ್ಪಾಲು, ಸಂತೋಷ್ ಶೆಟ್ಟಿ ಚಾರ, ರಾವೇಂದ್ರ ನಾಯ್ಕ ಇಂದಿರಾನಗರ ಸೇರಿದಂತೆ ಪಕ್ಷದ ವಿವಿಧ ಟಕಗಳ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net