ಮಗಳ ನಡೆ ಎದೆಗೆ ಚೂರಿ ಹಾಕಿದಂತೆ ಇದೆ, ನಾನು ಕಾಂಗ್ರೆಸ್​ ಬಿಡಲ್ಲ: ಕಾಗೋಡು ತಿಮ್ಮಪ್ಪ

kagodu timmappa
Published on

ಶಿವಮೊಗ್ಗ: ಇದೀಗ ತಾನೇ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿಗೆ ಸೇರ್ಪಡೆಯಾಗಿ ನಾನಾ ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದರು. ಅವರ ಹಿಂದೆಯೇ ಕಾಗೋಡು ತಿಮ್ಮಪ್ಪ ಕೂಡ ಬಿಜೆಪಿ ಸೇರುತ್ತಾರಾ ಎನ್ನುವ ಊಹಾಪೋಹಗಳು ಹುಟ್ಟಿಕೊಂಡಿದ್ದು ಇದೀಗ ಕಾಂಗ್ರೆಸ್​ ಹಿರಿಯ ಶಾಸಕರು ಎಲ್ಲಾ ಪ್ರಶ್ನೆಗಳನ್ನೂ ಬಗೆಹರಿಸಿದ್ದಾರೆ.

"ಎದೆಗೆ ಚೂರಿ ಹಾಕಿದಂತೆ ಆಗಿದೆ"

ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ, "ಮಗಳು ಬಿಜೆಪಿ ಸೇರಲು ಹೊರಟಿರುವುದು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ಆಕೆ ಇಂತಹ ಕೆಲಸ ಮಾಡಬಾರದಿತ್ತು" ಎಂದು ಬೇಸರ ಹೊರ ಹಾಕಿದ್ದಾರೆ.

ಹರತಾಳು ಹಾಲಪ್ಪ ಮಾಡಿದ್ದು ಇರಬಹುದು!

ಪುತ್ರಿ ರಾಜನಂದಿನಿ ಬಿಜೆಪಿ ಸೇರಲು ಹೊರಟಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, "ಈ ವಿಚಾರ ನನಗೆ ಗೊತ್ತಿರಲಿಲ್ಲ. ನನಗೆ ಈಗಷ್ಟೇ ವಿಷಯ ಗೊತ್ತಾಯಿತು. ರಾಜ ನಂದಿನಿ ಈ ರೀತಿ ಮಾಡುತ್ತಾಳೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಇದೆಲ್ಲ ಶಾಸಕ ಹರತಾಳು ಹಾಲಪ್ಪ ಅವರ ತಂತ್ರ ಇರಬಹುದು" ಎಂದು ಹೇಳಿದ್ದಾರೆ.

ನಾನು ಕಾಂಗ್ರೆಸ್​ ಬಿಡಲ್ಲ!

ಇದೇ ವೇಳೆಯಲ್ಲಿ ಅವರು "ನಾವೆಲ್ಲ ರಾಜಕಾರಣದಲ್ಲಿ ಬದ್ಧತೆ, ಸ್ಥಿರತೆ ಇಟ್ಟುಕೊಂಡು ಬೆಳೆದು ಬಂದವರು. ಆ ಸಂತೋಷ ನನಗೆ ಇದೆ. ಏನೇ ಆಗಲಿ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ನಾನು ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿಯೇ ನಿಲ್ಲುತ್ತೇನೆ" ಎಂದು ಕಾಗೋಡು ತಿಮ್ಮಪ್ಪ ಸ್ಪಷ್ಟನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net