More

    ದರ್ಶನ್ ನಟನೆಯ ಕಾಟೇರ ಚಿತ್ರತಂಡದಿಂದ ಹೊರಬಿತ್ತು ಹೊಸ ಅಪ್ಡೇಟ್; ಟ್ರೈಲರ್ ರಿಲೀಸ್​ಗೆ ಮುಹೂರ್ತ ಫಿಕ್ಸ್

    ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ, ತರುಣ್​ ಸುಧೀರ್​ ನಿರ್ದೇಶನದ ಬಹು ನಿರೀಕ್ಷಿತ ಕಾಟೇರ ಚಿತ್ರ ತಂಡದಿಂದ ಹೊಸ ಅಪ್ಡೇಟ್​ ಒಂದು ಹೊರ ಬಿದಿದ್ದು, ಚಿತ್ರದ ಕುರಿತು ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ.

    ಚಿತ್ರ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರದ ಮಾಹಿತಿ ಹೊರ ಬರುತ್ತಿವೆ. ನಿನ್ನೆ ಮೊನ್ನೆವರೆಗೂ ಕಾಟೇರ ಚಿತ್ರದ ಹಾಡಿನ ಮೋಡಿ ಇತ್ತು. ಈಗಲೂ ಅದು ಮುಂದುವರೆದಿದೆ. ಈಗಾಗಲೇ ಟೀಸರ್​ ಹಾಗೂ ಹಾಡುಗಳ ಮೂಲಕ ಧೂಳೆಬ್ಬಿಸಿರುವ ಕಾಟೇರ ಚಿತ್ರದ ಟ್ರೈಲರ್​ ರಿಲೀಸ್​ ಡೇಟ್​ ಘೋಷಣೆಯಾಗಿದೆ.

    ಇದನ್ನೂ ಓದಿ: ಲೀಲಮ್ಮರನ್ನು ನೋಡಿಕೊಳ್ಳುತ್ತಿದ್ದ ಬಂಗಾರಮ್ಮ ನಿಧನ

    ದರ್ಶನ್ ಅಭಿನಯದ ಕಾಟೇರ ಚಿತ್ರದ ಟ್ರೈಲರ್‌ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಟ್ರೈಲರ್​ಅನ್ನು ಡಿಸೆಂಬರ್​ 16ರಂದು ಬಿಡುಗಡೆ ಮಾಡಲಿದ್ದು, ಇದಕ್ಕಾಗಿಯೇ ಒಂದು ರಕ್ತ ಸಿಕ್ತ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇದನ್ನು ನೋಡಿದ ಬಳಿಕ ಚಿತ್ರದ ಬಗೆಗಿನ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದ್ದು, ಟ್ರೈಲರ್​ ಬರುವಿಕೆಗಾಗಿ ಕಾಯುತ್ತಿದ್ದಾರೆ.

    ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್​ ಸ್ಯಾಂಡಲ್​ವುಡ್​ಗೆ ಪಾದರ್ಪಣೆ ಮಾಡುತ್ತಿದ್ದು, ಚಿತ್ರದಲ್ಲಿ ಹಿರಿಯ ನಟರಾದ ಬಿರಾದಾರ್, ಜಗಪತಿ ಬಾಬು, ಕುಮಾರ್​ ಗೋವಿಂದ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts