ತೆಲಂಗಾಣ: ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರು ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಇಂದು ಭೇಟಿಯಾದರು. ಐದು ತಿಂಗಳ ಬಳಿಕ ಮಗಳನ್ನು ಕಂಡು ಕೆಸಿಆರ್ ಭಾವುಕರಾಗಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ‘ಆಪರೇಷನ್ ಭೇಡಿಯಾ’: ಎಂಟು ಮಂದಿಯನ್ನು ಕೊಂದ ನರಭಕ್ಷಕ ತೋಳಗಳ ಸೆರೆಗೆ ರೋಚಕ ಕಾರ್ಯಾಚರಣೆ
ತಿಹಾರ್ ಜೈಲಿನಿಂದ ಬಿಡುಗಡೆಯಾದ ಎರಡು ದಿನಗಳ ಬಳಿಕ ಎರವಳ್ಳಿಯಲ್ಲಿರುವ ಕೆಸಿಆರ್ ನಿವಾಸಕ್ಕೆ ಪತಿ, ಮಗನ ಸಮೇತ ತೆರಳಿದ ಕೆ.ಕವಿತಾ, ತಂದೆಯ ಆರ್ಶೀವಾದ ಪಡೆದಿದ್ದಾರೆ. ತಮ್ಮ ತಂದೆಯ ನಿವಾಸದಲ್ಲಿ ಕವಿತಾ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ.
అక్రమ నిర్బంధం నుంచి బయటకొచ్చిన బిడ్డను చూసి బీఆర్ఎస్ అధినేత కేసీఆర్ కండ్లల్లో ఆత్మీయ ఆనందం
🔹ఎర్రవెల్లి నివాసంలో తండ్రి, బీఆర్ఎస్ అధినేత కేసీఆర్ గారిని కలిసిన ఎమ్మెల్సీ కవిత
🔹భర్త, కుమారునితో కలిసి వచ్చిన ఆడబిడ్డకు ఆత్మీయ ఆహ్వానం
🔹కవిత గారిని ఆప్యాయంగా అక్కున చేర్చుకుని… pic.twitter.com/8nkQvk3GJG
— BRS Party (@BRSparty) August 29, 2024
5 ತಿಂಗಳ ನಂತರ ಮಾಜಿ ಸಿಎಂ ಕೆಸಿಆರ್ ತಮ್ಮ ಮಗಳನ್ನು ಭೇಟಿ ಮಾಡಿದ್ದಾರೆ. ಮಗಳನ್ನು ಕಂಡ ಅವರು ಪ್ರೀತಿಯಿಂದ ಅಪ್ಪುಗೆ ನೀಡಿ ಭಾವುಕರಾಗಿದ್ದಾರೆ ಎಂದು ಬಿಆರ್‌ಎಸ್ ಪಕ್ಷದ ಮೂಲಗಳು ತಿಳಿಸಿವೆ.
ತಂದೆಯನ್ನು ಭೇಟಿಯಾಗಿರುವ ಕುರಿತು ಕವಿತಾ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಸತ್ಯಮೇವ ಜಯತೆ ಎಂದು ಬರೆದುಕೊಂಡಿದ್ದಾರೆ.
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಾರ್ಚ್‌ನಿಂದ ಜೈಲಿನಲ್ಲಿದ್ದ ಕೆ. ಕವಿತಾ ಆ.27ರ ಸಂಜೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ತೆಲಂಗಾಣದ ರಾಜಕಾರಣಿ ಕವಿತಾ ಅವರಿಗೆ ಆ. 27ರಂದು ಬೆಳಗ್ಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆ ದಿನದ ಸಂಜೆ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು.
46 ವರ್ಷದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕವಿತಾ ಅವರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಎರಡೂ ತನಿಖೆಯನ್ನು ಪೂರ್ಣಗೊಳಿಸಿರುವುದರಿಂದ ಅವರನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳುವುದು ಇನ್ನು ಮುಂದೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.