

ನವದೆಹಲಿ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್ ಠಾಕೂರ್ ಅವರ ಹಾಟ್ ಅವತಾರಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ನೀಲಿ ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿರುವ ಮೃನಾಲ್ ಠಾಕೂರ್ ಅವರ ಹಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಮುದ್ರ ತೀರದಲ್ಲಿ ನೀರಿನಲ್ಲಿ ತೋಯ್ದಿರುವ ಸ್ಥಿತಿಯಲ್ಲಿ ನಿಂತು ಕ್ಯಾಮೆರಾಗೆ ಮೃನಾಲ್ ಪೋಸ್ ನೀಡಿದ್ದಾರೆ. ಫೋಟೋಗೆ ಫೋಟೋ ಡಂಪ್ ಎಂದು ಅಡಿಬರಹ ನೀಡಿದ್ದಾರೆ.
ಮೃನಾಲ್ ಅವರು ಪ್ರವಾಸದಲ್ಲಿ ಇರುವಂತೆ ತೋರುತ್ತದೆ. ಅನೇಕ ಫೋಟೋಗಳನ್ನು ಶೇರ್ ಮಾಡಿದ್ದು, ಅದರಲ್ಲಿ ವಡಾ ಪಾವ್ ಮತ್ತು ಉತ್ತರ ಭಾರತದ ಥಾಲಿ ಸೇರಿದಂತೆ ಸ್ವಾದಿಷ್ಟಕರ ಆಹಾರದ ಫೋಟೋ ಕೂಡ ಇದೆ. 24 ಗಂಟೆಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಲಾಗಿದ್ದು, ಈವರೆಗೆ 15 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಹಲವರು ಮೃನಾಲ್ ಅವರನ್ನು ಸೀತಾ ಮಹಾಲಕ್ಷ್ಮೀ ಪಾತ್ರದಲ್ಲಿ ನೋಡಿರುವುದರಿಂದ ಅದರಿಂಚಾಗೆ ಹಾಟ್ ಅವತಾರದಲ್ಲಿ ಅವರನ್ನು ನೋಡಲು ಇಷ್ಟಪಡುತ್ತಿಲ್ಲ ಮತ್ತು ಬೇಸರ ಸಹ ಹೊರಹಾಕಿದ್ದಾರೆ. ಇದು ನಮ್ಮ ಸೀತಾ ಮಹಾಲಕ್ಷ್ಮೀನಾ ಎಂದು ಕೆಲ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಹಾಟ್ ಅವತಾರ ಕಂಡು ಏನಾಯಿತು ಸೀತಾ? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ದಯವಿಟ್ಟು ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನಿಮ್ಮ ಕಾಲಿಗೆ ಬೇಕಾದರೂ ಬೀಳುತ್ತೇನೆ, ದಯವಿಟ್ಟು ಈ ಬಿಕಿನಿ ಫೋಟೋಗಳನ್ನು ಡಿಲೀಟ್ ಮಾಡಿ. ನಿಮ್ಮನ್ನು ಈ ರೀತಿಯಾಗಿ ನೋಡಲು ಆಗುತ್ತಿಲ್ಲ ಎಂದು ನೆಟ್ಟಿಗನೊಬ್ಬ ಪರಿಪರಿಯಾಗಿ ಬೇಡಿಕೊಂಡಿದ್ದಾನೆ.
ಸೀತಾ ಮಹಾಲಕ್ಷ್ಮೀ ಒಂದು ಪಾತ್ರವಷ್ಟೇ ಅದು ರೀಲ್ ಮತ್ತು ಮೃನಾಲ್ ಠಾಕೂರ್ ರಿಯಲ್ ಮತ್ತು ಬಿಕಿನಿ ಧರಿಸುವುದರಲ್ಲಿ ಏನು ತಪ್ಪಿದೆ ಎಂದು ಕೆಲವರು ಪ್ರಶ್ನೆ ಮಾಡುವ ಮೂಲಕ ಮೃನಾಲ್ ಪರ ಬ್ಯಾಟ್ ಬೀಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಮೃನಾಲ್ ಠಾಕೂರ್ ಅವರು ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಗುಮ್ರಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)