ಈವರೆಗೆ ನೋಡಿದ್ದು ಕೇವಲ ಟ್ರೈಲರ್: ಸಿನಿಮಾ ಇನ್ನೂ ಬಾಕಿ ಇದೆ ಎಂದ ಪ್ರಧಾನಿ ಮೋದಿ

pm modi
Published on

ನವದೆಹಲಿ: ಹತ್ತು ವರ್ಷಗಳ ನನ್ನ ಆಡಳಿತದಲ್ಲಿ ನೀವು ನೋಡಿರುವುದು ಕೇವಲ ಟ್ರೈಲರ್ ಮಾತ್ರ, ಸಿನಿಮಾ ಇನ್ನೂ ಬಾಕಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈಗ ಮಾಡಿರುವುದಕ್ಕಿಂತ ಅನೇಕ ಕೆಲಸಗಳು ಮುಂದೆ ಬರಲಿಕ್ಕೆ ಇವೆ. ದೇಶದ ಅಭಿವೃದ್ಧಿಯೇ ನಮ್ಮ ಮೂಲಮಂತ್ರ ಎಂದು ತಿಳಿಸಿದರು.

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ ಅವರು, ಈವರೆಗೆ ನಾನು ಏನು ಮಾಡಿರುವೆ ಎಂಬುದು ಮುಖ್ಯ ಅಲ್ಲ. ಈವರೆಗೆ ಏನು ನಡೆದಿದೆಯೋ ಅವೆಲ್ಲ ಟ್ರೈಲರ್ ಮಾತ್ರ. ಪ್ರಮುಖ ವಿಷಯಗಳು ಇನ್ನು ಮುಂದೆ ಬರಲಿಕ್ಕಿದೆ. ಸಾಕಷ್ಟು ಕೆಲಸಗಳು ಪೂರ್ತಿ ಮಾಡಬೇಕಿದೆ. ಒಂದಷ್ಟು ಕನಸುಗಳು ಬಾಕಿ ಇವೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net