More

    Success Story: ಆ ರೈತನ ಬದುಕನ್ನೇ ಬದಲಿಸಿದ ಐಡಿಯಾ.. 50 ಸಾವಿರ ಬಂಡವಾಳ, 2.50 ಲಕ್ಷ ರೂ.ಆದಾಯ!

    ಲಖನೌ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹಣ ಗಳಿಸುವ ಬಯಕೆ ಹೊಂದಿರುತ್ತಾರೆ. ಆದರೆ ಯಾವ ರೀತಿ ಹಣ ಮಾಡಬಹುದು ಎಂಬ ಬಗ್ಗೆ ಯೋಚಿಸಿ ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುತ್ತಾರೆ. ಆದರೆ ಇಲ್ಲೊಬ್ಬ ರೈತ ಸ್ನೇಹಿತ ಕೊಟ್ಟ ಸಲಹೆ ಅನುಸರಿಸಿ ಬೆಳೆ ಬದಲಿಸಿ ಎರಡೇ ತಿಂಗಳಲ್ಲಿ ಎರಡೂವರೆ ಲಕ್ಷ ಸಂಪಾದಿಸಿ ಮಾದರಿಯಾಗಿದ್ದಾನೆ. ಆ ಯುವ ರೈತನ ಯಶೋಗಾಥೆ ಇಲ್ಲಿದೆ ನೋಡಿ…

    ಇದನ್ನೂ ಓದಿ: VIDEO | ಮತದಾರರಿಗೆ ಕಟಿಂಗ್‌ ಮಾಡಿ, ಗಡ್ಡ ಬೋಳಿಸಿ ವೋಟ್ ಕೇಳಿದ ಅಭ್ಯರ್ಥಿ

    ಉತ್ತರಪ್ರದೇಶದ ರಾಯ್ ಬರೇಲಿ ಜಿಲ್ಲೆಯ ಪದ್ರಾ ಖುರ್ದ್ ಗ್ರಾಮದ ವಿಜಯ್ ಕುಮಾರ್ ತಮ್ಮದೇ ಆದ ರೀತಿಯಲ್ಲಿ ಕೃಷಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಅವರು ತಮ್ಮ ಪೂರ್ವಜರಿಂದ ಬಂದ ಭೂಮಿಯಲ್ಲಿ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು. ಆದರೆ ಅವರ ಸಂಬಂಧಿ ಪವನ್ ವರ್ಮಾ ತೋಟಗಾರಿಕೆ ಬೆಳೆ ಮಾಡುವಂತೆ ಸಲಹೆ ನೀಡಿದರು. ಬೇಸಿಗೆ ಕಾಲದಲ್ಲಿ ಬಹುಬೇಡಿಕೆ ಇರುವ ಕಲ್ಲಂಗಡಿ ಬೆಳೆಯಲು ಸೂಚಿಸಿದರು. ಅವರ ಸಲಹೆ ಮೇರೆಗೆ ಕಲ್ಲಂಗಡಿ ಕೃಷಿ ಆರಂಭಿಸಿದರು.

    ಒಂದು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದು, 50 ರಿಂದ ರೂ. 60 ಸಾವಿರ ರೂ.ಬಂಡವಾಳ ಹಾಕಲಾಗಿದೆ. ಕಲ್ಲಂಗಡಿ ಇಳುವರಿ ಉತ್ತಮವಾಗಿ ಬಂದಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿದೆ. ಇದರಿಂದ ಹೂಡಿಕೆಯನ್ನು ಕಳೆದರೆ 2 ಲಕ್ಷದಿಂದ 2.5 ಲಕ್ಷ ರೂ.ವರೆಗೆ ಆದಾಯ ಬಂದಿದೆ.

    ಇತರೆ ಬೆಳೆಗಳಿಗಿಂತ ಹೆಚ್ಚು ಆದಾಯ ನೀಡುವ ಬೆಳೆ ಇದಾಗಿದೆ. ಇಲ್ಲಿ ಬೆಳೆಯುವ ಕಲ್ಲಂಗಡಿ ರಾಯ್ ಬರೇಲಿ ಮತ್ತು ಲಖನೌ ಮಾರುಕಟ್ಟೆಗೆ ಸಾಗಿಸಲಾಗುತ್ತಿದೆ ಎಂದು ವಿಜಯ್ ಕುಮಾರ್ ತಿಳಿಸಿದರು.
    ಋತುಮಾನಕ್ಕೆ ತಕ್ಕಂತೆ ಕೃಷಿ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎನ್ನುತ್ತಾರೆ ಯುವ ಕೃಷಿಕ ವಿಜಯ್​ ಕುಮಾರ್​.

    ತೆಲುಗು ನಟಿಯ ಹಾಟ್​ ವರ್ಕ್​ಔಟ್ ವಿಡಿಯೋ ವೈರಲ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts