ಪಠ್ಯೇತರ ಚಟುವಟಿಕೆ ಏಕಾಗ್ರತೆಗೆ ಸಹಕಾರಿ

camp
ರಜಾರಂಗು-24 22ನೇ ದಿನದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಹಿರಿಯ ಶಿಬಿರಾರ್ಥಿ ಪ್ರಣಮ್ಯಾ ಮಾತನಾಡಿದರು. ರಂಗ ನಿರ್ದೇಶಕ ನಾಗೇಶ್ ಕೆದೂರು, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಶಿಬಿರಾರ್ಥಿ ನಿಶಾನಿ ಬೇಳೂರು ಉಪಸ್ಥಿತರಿದ್ದರು.
Published on

ಕೋಟ: ಕಲಿಯುವಿಕೆ ನಿರಂತರವಾಗಿರಬೇಕು. ಎಲ್ಲ ವಿಷಯದಲ್ಲಿಯೂ ಪರಿಪೂರ್ಣತೆ ಸಾಧಿಸಬೇಕು. ರಜಾರಂಗು ಆರಂಭದ ದಿನಗಳ ಶಿಬಿರದ ವಿದ್ಯಾರ್ಥಿಯಾಗಿ ಸೇರಿದ ದಿನಗಳು ಅವಿಸ್ಮರಣೀಯ. ಇಂತಹ ಪಠ್ಯೇತರ ಚಟುವಟಿಕೆಗಳು ನನ್ನನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವಂತೆ ಮಾಡಿತ್ತು. ನನ್ನಲ್ಲಿ ಏಕಾಗ್ರತೆ, ಸಾಧಿಸುವ ಛಲ ಇಂತಹ ಚಟುವಟಿಕೆಗಳಿಂದ ನೆರವೇರಿತು ಎಂದು ಹಿರಿಯ ಶಿಬಿರಾರ್ಥಿ ಪ್ರಣಮ್ಯಾ ಹೇಳಿದರು.

ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ರಜಾರಂಗು-24 22ನೇ ದಿನದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಗುರುವಾರ ಶಿಶುಮಂದಿರದ ಸಮೀಪದ ಪ್ರಕೃತಿಯ ಮಡಿಲಲ್ಲಿ ಶಿಬಿರದ ಆವರಣದಲ್ಲಿ ಮಾತನಾಡಿದರು.

ರಂಗ ನಿರ್ದೇಶಕ ನಾಗೇಶ್ ಕೆದೂರು, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಶಿಬಿರಾರ್ಥಿ ನಿಶಾನಿ ಬೇಳೂರು, ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net