VIDEO | ಮತದಾರರಿಗೆ ಕಟಿಂಗ್‌ ಮಾಡಿ, ಗಡ್ಡ ಬೋಳಿಸಿ ವೋಟ್ ಕೇಳಿದ ಅಭ್ಯರ್ಥಿ

parirajan
Published on

ತಮಿಳುನಾಡು: ಲೋಕಸಭೆ ಚುನಾವಣೆ ಪ್ರಚಾರ ಜೋರಾಗಿದೆ.  ಜನರಿಗೆ ಸಾಲು ಸಾಲು ಭರವಸೆಗಳನ್ನು ನೀಡಿ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಮಾತ್ರ ವಿಶೇಷ ಸೇವೆ ಮಾಡಿ ಮತದಾರರ ಗಮನ ಸೆಳೆದು ವೋಟ್​​ ಕೇಳುತ್ತಿದ್ದಾರೆ.

ತಮಿಳುನಾಡಿನಲ್ಲಿ ಅಭ್ಯರ್ಥಿಯೊಬ್ಬರು ಜನರ ಮತಗಳನ್ನು ಸೆಳೆಯಲು ಕ್ಷೌರಿಕನಾಗಿ ಬದಲಾಗಿದ್ದಾರೆ. ಜನರಿಗೆ ಕ್ಷೌರ ಮಾಡುವ ಮೂಲಕ ಮತಯಾಚನೆ ನಡೆಸುತ್ತಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ.

ತಮಿಳುನಾಡಿನ ರಾಮನಾಥಪುರಂ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪರಿರಾಜನ್‌ ಎಂಬುವರು ಚುನಾವಣೆ ಪ್ರಚಾರದ ಭಾಗವಾಗಿ ಒಂದು ದಿನದ ಮಟ್ಟಿಗೆ ಕ್ಷೌರಿಕನ ಕೆಲಸ ಮಾಡಿದ್ದಾರೆ. ಜನರಿಗೆ ಕಟಿಂಗ್‌ ಮಾಡಿ, ಗಡ್ಡ ಬೋಳಿಸಿ, ಕೈ ಮುಗಿದು ಮತ ಕೇಳುತ್ತಿದ್ದಾರೆ. ಇದು ಸುತ್ತಮುತ್ತಲಿನ ಭಾಗದ ಜನರ ಗಮನವನ್ನೂ ಸೆಳೆದಿದೆ.

ಒಂದಷ್ಟು ಜನ ಹೊಗಳಿದ್ದಾರೆ. ಚುನಾವಣೆ ವೇಳೆ ಜನರ ಗಡ್ಡ ಬೋಳಿಸುತ್ತಾರೆ, ಈತ ಮತಗಳಿಗಾಗಿ ಜನರ ಎದುರು ಡ್ರಾಮಾ ಮಾಡುತ್ತಿದ್ದಾನೆ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net