More

    ತೆರೆ ಮೇಲೆ ರಾರಾಜಿಸಲಿದ್ದಾರೆ ‘ಜೂನಿಯರ್’ ಜನಾರ್ದನ ರೆಡ್ಡಿ; ಕಿರೀಟಿ ಹೊಸ ಸಿನಿಮಾ ಟೈಟಲ್​ ಲಾಂಚ್..

    ಬೆಂಗಳೂರು: ಜೂನಿಯರ್ ಜನಾರ್ದನ ರೆಡ್ಡಿ ಅರ್ಥಾತ್ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಚಿತ್ರರಂಗಕ್ಕೆ ಪ್ರವೇಶಿಸಿರುವುದು, ಅವರ ಚೊಚ್ಚಲ ಸಿನಿಮಾ ಮೂಡಿ ಬರುತ್ತಲಿರುವುದೆಲ್ಲ ಈಗಾಗಲೇ ಗೊತ್ತಿರುವ ವಿಷಯವೇ. ಆದರೆ ಕಿರೀಟಿಯ ಪ್ರಪ್ರಥಮ ಸಿನಿಮಾದ ಶೀರ್ಷಿಕೆ ಯಾವುದಿರಬಹುದು ಎಂಬ ಕುತೂಹಲ ಕೌತುಕವಾಗಿಯೇ ಉಳಿದಿತ್ತು. ಆದರೆ ಅದೀಗ ಅನಾವರಣಗೊಂಡಿದೆ.

    ಅದ್ದೂರಿಯಾಗಿ ಸೆಟ್ಟೇರಿ ಚಿತ್ರೀಕರಣಕ್ಕೆ ಹೊರಟ ಚಿತ್ರತಂಡ ಹೀರೋ ಇಂಟ್ರೊಡಕ್ಷನ್ ವಿಡಿಯೋ ಬಿಡುಗಡೆ ಮಾಡಿತ್ತೇ ಹೊರತು ಸಿನಿಮಾ ಟೈಟಲ್ ರಿವೀಲ್ ಮಾಡಿರಲಿಲ್ಲ. ಕಿರೀಟಿ ಮೊದಲ ಚಿತ್ರದ ಟೈಟಲ್ ಏನಿರಬಹುದು, ಟೈಟಲ್ ಮಾಸ್ ಆಗಿರುತ್ತಾ, ಕ್ಲಾಸ್ ಆಗಿರುತ್ತಾ..? ಹೀಗೆ ಟೈಟಲ್​ ಕುರಿತು ಒಂದಷ್ಟು ಕುತೂಹಲ ಹುಟ್ಟಿಕೊಂಡಿತ್ತು. ಆ ಎಲ್ಲ ಕುತೂಹಲಕ್ಕೂ ಚಿತ್ರತಂಡ ನಿನ್ನೆ ತೆರೆ ಎಳೆದಿದೆ. ಕಿರೀಟಿ ಹುಟ್ಟುಹಬ್ಬಕ್ಕೆ ಟೈಟಲ್ ವಿಡಿಯೋ ಬಿಡುಗಡೆ ಮಾಡಿ ‘ಜೂನಿಯರ್’ ಎಂಬ ಟೈಟಲ್ ರಿವೀಲ್ ಮಾಡಿದೆ.

    ಡಿಫರೆಂಟ್ ಆಗಿ ಟೈಟಲ್ ಲಾಂಚ್ ಮಾಡಿರುವ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ವಾರಾಹಿ ಚಲನಚಿತ್ರ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಿರುವ ಟೈಟಲ್ ವೀಡಿಯೋ ಟ್ರೆಂಡಿಂಗ್​ನಲ್ಲಿದೆ. ವಿಶೇಷ ಅಂದ್ರೆ ಕಿರೀಟಿ ಕನ್ನಡ, ತೆಲುಗು ಮಾತ್ರವಲ್ಲದೇ ತಮಿಳಿನಲ್ಲೂ ಸ್ವತಃ ತಾವೇ ಧ್ವನಿ ನೀಡಿರುವುದು ಅಲ್ಲಿಯ ಚಿತ್ರರಸಿಕರ ಮನಸ್ಸಿಗೆ ಖುಷಿ ನೀಡಿದ್ದು, ಕಿರೀಟಿಗೆ ವೆಲ್ ಕಂ ಹೇಳುತ್ತಿದ್ದಾರೆ.

    ತೆರೆ ಮೇಲೆ ರಾರಾಜಿಸಲಿದ್ದಾರೆ ‘ಜೂನಿಯರ್’ ಜನಾರ್ದನ ರೆಡ್ಡಿ; ಕಿರೀಟಿ ಹೊಸ ಸಿನಿಮಾ ಟೈಟಲ್​ ಲಾಂಚ್..

    ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ನಿರ್ಮಾಣವಾಗುತ್ತಿದ್ದು ಮೊದಲ ಸಿನಿಮಾದಲ್ಲೇ ನಾಲ್ಕು ಚಿತ್ರರಂಗಕ್ಕೆ ಹೀರೋ ಆಗಿ ಕಿರೀಟಿ ಎಂಟ್ರಿ ಕೊಡುತ್ತಿದ್ದಾರೆ. ‘ಜೂನಿಯರ್’ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಬಿಗ್ ಬಜೆಟ್​ನಲ್ಲಿ ಬಹಳ ಅದ್ದೂರಿಯಾಗಿ ವಾರಾಹಿ ಫಿಲ್ಮ್​ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

    ‘ಮಾಯಾಬಜಾರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಚಿತ್ರಕಥೆ ರಚಿಸಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಕಿರೀಟಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್​ಮುಖ್​ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ತಾಂತ್ರಿಕ ಬಳಗ ಕೂಡ ಶ್ರೀಮಂತವಾಗಿದ್ದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ. ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ಸ್ ಸಾಹಸ ನಿರ್ದೇಶನವೂ ಈ ಚಿತ್ರಕ್ಕಿದೆ.

    ಮಗನ ಪರವಾಗಿ ಹೀಗೊಂದು ಮನವಿ ಮಾಡಿಕೊಂಡ್ರು ಸುಮಲತಾ ಅಂಬರೀಷ್​..

    ಸೌಂದರ್ಯ ಜಗದೀಶ್ ಮತ್ತು ನೆರೆಮನೆ ಜಗಳ ಬೀದಿಗೆ; ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts