More

    ಸಮರ್ಪಕ ಅನುಷ್ಠಾನವಾಗಲಿ ಕೃಷಿ ಯಂತ್ರಧಾರೆ

    ಮಡಿಕೇರಿ:

    ಕೃಷಿ ಕೆಲಸಕ್ಕೆ ಕೂಲಿಯಾಳುಗಳು ಸಿಗುತ್ತಿಲ್ಲ ಎನ್ನುವುದು ಸಾಮಾನ್ಯ ದೂರು. ಹಾಗಾಗಿ ಯಾಂತ್ರೀಕೃತ ಕೃಷಿಯತ್ತ ರೈತರು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ದುಬಾರಿ ಕೃಷಿಯಂತ್ರಗಳು ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಕೈಗೆಟುಕದಷ್ಟು ದುಬಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಇಂಥ ರೈತರಿಗಾಗಿ ಸರ್ಕಾರ ಕೃಷಿ ಯಂತ್ರಧಾರೆ ಯೋಜನೆ ರೂಪಿಸಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಹಿಡುವಳಿ ಹೊಂದಿರುವ ರೈತರಿಗೆ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ ೨೦೧೪ರಲ್ಲಿ ಕೃಷಿ ಯಂತ್ರಧಾರೆ ಯೋಜನೆಯನ್ನು ಸರ್ಕಾರ ಆರಂಭಿಸಿತು. ಈ ಸಂದರ್ಭದಲ್ಲಿ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಚಾಲನೆ ನೀಡಲಾಗಿತ್ತು.

    ಕೊಡಗಿನ ೧೬ ಹೋಬಳಿಗಳಲ್ಲೂ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಿಂದ ರೈತರು ಕೃಷಿ ಯಂತ್ರೋಪಕರಣಗಳನ್ನು ತಮಗೆ ಅಗತ್ಯವಿರುವ ಸಮಯಕ್ಕೆ ಕಡಿಮೆ ಬಾಡಿಗೆ ದರದಲ್ಲಿ ಪಡೆದುಕೊಂಡು ಕಾಲಮಾನಕ್ಕೆ ಸರಿಯಾಗಿ ಬೇಸಾಯ ಚಟುವಟಿಕೆಗಳನ್ನು ನಡೆಸುವ ಮೂಲಕ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಇಳುವರಿ ಪಡೆಯುವ ಆಶಯ ಸರ್ಕಾರದ್ದಾಗಿದೆ.


    ಕೃಷಿ ದುಬಾರಿ ಆಗುತ್ತಿರುವ ಇಂದಿನ ದಿನಗಳಲ್ಲಿ ಬಹುತೇಕರು ಇರುವ ಜಮೀನು ಬಿಟ್ಟು ಬೇರೆ ಉದ್ಯೋಗದ ಕಡೆಗೆ ಮನಸ್ಸು ಮಾಡುತ್ತಿದ್ದಾರೆ. ಮತ್ತೊಂದು ಕಡೆ ದುಡಿಯುವ ಕೈಗೆ ಉದ್ಯೋಗವಕಾಶಗಳು ಸಾಕಷ್ಟು ಇರುವುದರಿಂದ ಹೆಚ್ಚು ಶ್ರಮ ಬೇಡುವ ಕೃಷಿ ಕೆಲಸಕ್ಕೆ ಕಾರ್ಮಿಕರ ಅಭಾವ ಕಂಡು ಬರುತ್ತಿದೆ. ಇಂಥ ಸಂದರ್ಭದಲ್ಲಿ ಕೃಷಿಯಲ್ಲಿನ ಯಾಂತ್ರೀಕರಣ ಆಶಾಕಿರಣವಾಗಿ ಕಂಡುಬರುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಅನ್ವೇಷಣೆಗಳು, ಪ್ರತಿಯೊಂದು ಕೃಷಿ ಕಾರ್ಯಕ್ಕೂ ಸಿಗುತ್ತಿರುವ ಯಂತ್ರೋಪಕರಣಗಳು ಕೃಷಿಕಾರ್ಯವನ್ನು ಸುಲಭ ಮಾಡುತ್ತಿದ್ದರೂ ಇಂಥ ಯಂತ್ರಗಳನ್ನು ಖರೀದಿಸಲು ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಂದ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕೃಷಿ ಯಂತ್ರಧಾರೆ ಯೋಜನೆ ಬಗ್ಗೆ ಕೃಷಿಕರು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು.


    ರೈತರ ಮನೆ ಬಾಗಿಲಿನಲ್ಲಿ ಆಧುನಿಕ ಯಂತ್ರೋಪಕರಣಗಳ ಸೇವೆ ಒದಗಿಸುವುದು, ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು, ಸಕಾಲದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೈಟೆಕ್ ಯಂತ್ರೋಪಕರಣಗಳ ಸೇವೆಗಳನ್ನು ಒದಗಿಸುವುದು, ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಸೂಕ್ತ ಬಾಡಿಗೆ ದರದಲ್ಲಿ ಯಂತ್ರೋಪಕರಣಗಳನ್ನು ಒದಗಿಸುವುದು, ಈ ಮೂಲಕ
    ರೈತರ ಲಾಭದಾಯಕತೆಯನ್ನು ಹೆಚ್ಚಿಸುವುದು ಕೃಷಿ ಯಂತ್ರಧಾರೆ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.
    ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟರಿ ಟಿಲ್ಲರ್, ನೇಗಿಲು, ರೋಟವೇಟರ್, ಡಿಸ್ಕ್ ಪ್ಲೋವ್, ಡಿಸ್ಕ್ ಹ್ಯಾರೋ, ಲೆವೆಲರ್ ಬ್ಲೇಡ್, ಕೇಜ್ ಚಕ್ರ, ಬ್ಲೇಡ್ ಹಾರೋ, ಲೇಸರ್ ಚಾಲಿತ ಲೆವೆಲರ್, ಡಿಗ್ಗರ್
    ಬಂಡ್ ತಯಾರಕ, ವೀಡರ್, ಮಲ್ಚಿಂಗ್ ಯಂತ್ರ, ಬೇಲರ್, ರಾಗಿ ಶುಚಿಗೊಳಿಸುವ ಯಂತ್ರ, ಕಬ್ಬು ಕತ್ತರಿಸುವ ಯಂತ್ರ., ಪಂಪ್ ಸೆಟ್‌ಗಳು, ನೀರಿನ ಟ್ಯಾಂಕರ್, ಅಲ್ಯೂಮಿನಿಯಂ ಪೈಪ್‌ಗಳು, ಸ್ಪಿಂಕ್ಲರ್‌ಗಳು ಸೇರಿದಂತೆ ೪೫ಕ್ಕೂ ಹೆಚ್ಚು ರೀತಿಯ ಯಂತ್ರೋಪಕರಣಗಳು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ರೈತರ ಉಪಯೋಗಕ್ಕಾಗಿ ಲಭ್ಯವಿದೆ.

    ಆದರೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಹೆಸರಿಗೆ ಮಾತ್ರ ಎಂಬಂತೆ ಕೃಷಿ ಯಂತ್ರಧಾರೆ ಘಟಕಗಳು ಇವೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನ ಜವಾಬ್ದಾರಿ ಖಾಸಗಿಯವರಿಗೆ ವಹಿಸಲಾಗಿದೆ. ಈ ಕೇಂದ್ರಗಳಿಂದ ರೈತರಿಗೆ ಎಷ್ಟರ ಮಟ್ಟಿಗೆ ಪ್ರಯೋಜನ ಆಗುತ್ತಿದೆ ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.

    ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರದಲ್ಲೂ ಕೃಷಿ ಯಂತ್ರಧಾರೆ ಯೋಜನೆಯ ಘಟಕಗಳನ್ನು ಸರ್ಕಾರ ತೆರೆದಿದೆ. ಹೆಚ್ಚು ಯಂತ್ರಗಳು ಇಲ್ಲದೇ ಇರುವುದರಿಂದ ಸಮಯಕ್ಕೆ ಸರಿಯಾಗಿ ರೈತರಿಗೆ ತಲುಪುತ್ತಿಲ್ಲ ಹಾಗಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಇಂತಹ ಘಟಕ ತೆರೆಯಬೇಕು. ಆಯಾ ವ್ಯಾಪ್ತಿಯಲ್ಲಿ ಯಾವ ಬೆಳೆ ಹೆಚ್ಚು ಬೆಳೆಯುತ್ತಾರೆ ಅಂತಹ ಬೆಳೆಗಳಿಗೆ ಉಪಯೋಗವಾಗುವ ಯಂತ್ರ ಘಟಕ ತೆರೆಯಲಿ.
    ಸರೋಜಮ್ಮ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ, ಶನಿವಾರಸಂತೆ

    ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರದಲ್ಲೂ ಕೃಷಿ ಯಂತ್ರಧಾರೆ ಯೋಜನೆಯ ಘಟಕಗಳು ಇದ್ದರೂ ಬಹುತೇಕ ಕಡೆಗಳಲ್ಲಿ ಹೆಸರಿಗೆ ಮಾತ್ರ ಎಂಬಂತೆ ಇವೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಅನು?್ಠಾನ ಜವಾಬ್ದಾರಿ ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಂಡು ಮಾಡಬೇಕು. ರೈತರಿಗೆ ಅನುಕೂಲಕರವಾದ ಯಾವುದೇ ಯೋಜನೆ ನೇರವಾಗಿ ರೈತರಿಗೆ ತಲುಪಬೇಕು.
    ಉ?ಾ ಜಯೇಶ್, ಶನಿವಾರಸಂತೆ

    ಕೃಷಿ ಯಂತ್ರಧಾರೆ ಒಂದು ಉತ್ತಮ ಯೋಜನೆ. ಆದರೆ ಅದು ಎಲ್ಲರಿಗೂ ಕೈಗೆ ಸಿಗುವ ರೀತಿ ಇಲ್ಲ. ಕೆಲವು ಕಡೆ ಉತ್ತಮ ರೀತಿಯಲ್ಲಿ ಅನು?್ಠಾನಗೊಂಡಿದೆ ಮತ್ತೆ ಕೆಲವು ಕಡೆ ಇದು ವಿಫಲವಾಗಿದೆ. ಸರ್ಕಾರದ ಮೂಲ ಉದ್ದೇಶ ಇಲ್ಲಿ ರೈತರಿಗೆ ಸಿಗುತ್ತಿಲ್ಲ. ಮತ್ತೊಮ್ಮೆ ಎಲ್ಲೆಲ್ಲಿ ವಿಫಲವಾಗಿದೆ ಅಲ್ಲಿ ಮರುಪರಿಶೀಲನೆ ನಡೆಸಬೇಕು.
    ಜಶ್ಮಿ ಕೆ.ಎ., ಗೋಣಿಕೊಪ್ಪ

    ಇಂದು ಕೂಲಿ ಕಾರ್ಮಿಕರ ಕೊರತೆಯನ್ನು ಯಂತ್ರಗಳು ನಿಭಾಯಿಸುತ್ತಿದೆ. ಆದರೆ ಎಲ್ಲ ರೈತರಿಗೂ ಸ್ವಂತ ಉಪಕರಣ ಖರೀದಿಸಲು ಆಗುವುದಿಲ್ಲ. ಹಾಗಾಗಿ ಬಾಡಿಗೆ ಪಡೆಯಲು ಈ ಯೋಜನೆ ಉಪಯುಕ್ತವಾಗಿತ್ತು. ಆದರೆ ಎಲ್ಲ ಘಟಕಗಳೂ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ರೈತರು ಕ?್ಟ ಅನುಭವಿಸುವಂತಾಗಿದೆ.
    ಚೇತನ್ ಕೋಟೇರ, ಗೋಣಿಕೊಪ್ಪ

    ಪ್ರತಿ ಹೋಬಳಿಯಲ್ಲಿರುವ ಕೃಷಿ ಯಂತ್ರಧಾರೆ ಯೋಜನೆಯ ಕೇಂದ್ರಗಳು ಕೃಷಿಕರಿಗೆ ಪ್ರಯೋಜನಾಕಾರಿ ಆದರೂ ನಿರ್ವಹಣೆಯಲ್ಲಿನ ವೈಫಲ್ಯದಿಂದಾಗಿ ಉಪಯೋಗ ಇಲ್ಲದಂತಾಗಿದೆ. ಟ್ರ್ಯಾಕ್ಟರ್, ಬೆಳೆ ಕಟಾವು ಯಂತ್ರಗಳಿಗೆ ಚಾಲಕರಿಲ್ಲ. ತುಂತುರು ನೀರಾವರಿಯ ಉಪಕರಣಗಳು ನಿರ್ವಹಣೆ ಇಲ್ಲ. ಈ ಯೋಜನೆ ಕೃಷಿ ಇಲಾಖೆಯದ್ದಾ ? ಸಂಘ-ಸಂಸ್ಥೆಗಳದ್ದಾ ? ಅಥವಾ ಕಂಪೆನಿಗಳದ್ದಾ ಎನ್ನುವ ಗೊಂದಲ ಕಾಡುತ್ತಿದೆ. ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತಾಗಿದೆ
    ಎನ್.ಎಸ್. ಉದಯಶಂಕರ, ನಾಪೋಕ್ಲು

    ಕೃಷಿ ಯಂತ್ರಧಾರೆ ಯೋಜನೆ ಉತ್ತಮವಾಗಿದೆ. ಆದರೆ ರೈತರಿಗೆ ಅದರ ಸೌಲಭ್ಯ ಸಿಗಬೇಕು. ಪ್ರಚಾರದ ಕೊರತೆಯಿಂದ ರೈತರ ಇದರ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ. ಕಡಿಮೆ ದರದಲ್ಲಿ ಪ್ರಯೋಜನ ಸಿಗುವಂತಾಗಬೇಕು. ಸದ್ಯಕ್ಕಂತೂ ಈ ಯೋಜನೆ ಪ್ರಯೋಜನ ಯಾರಿಗೂ ಸಿಗದಂತಾಗಿದೆ.
    ಅಶ್ವಿನಿ ಕೃಷ್ಣಕಾಂತ್, ಕಾಫಿ ಬೆಳೆಗಾರರು, ಸಿಂಗನಳ್ಳಿ ಗ್ರಾಮ

    ಯಂತ್ರಗಳನ್ನು ಸರ್ಕಾರದಿಂದ ಬಾಡಿಗೆ ಕೊಡುವ ಯೋಜನೆ ಆಗಿರುವ ಕೃಷಿ ಯಂತ್ರಧಾರಾ ಯೋಜನೆಯ ಕೇಂದ್ರಗಳು ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಇವೆ. ಆದರೆ ಹೆಚ್ಚಿನ ರೈತರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಕೇಂದ್ರ ಎಲ್ಲಿದೆ ? ಯಾವ ಯಾವ ಯಂತ್ರಗಳು ಲಭ್ಯವಿದೆ ಎಂಬುದು ತಿಳಿದಿಲ್ಲ. ಆದ್ದರಿಂದ ಸರ್ಕಾರ ಯೋಜನೆ ಜಾರಿಗೆ ತರುವುದರೊಂದಿಗೆ ಅದು ಸೂಕ್ತ ಫಲಾನುಭವಿಗಳಿಗೆ ತಲುಪುವಂತೆ ಮಾಡಿದರೆ ಒಳಿತು.
    ಸಚಿನ್ ಬಿ.ಬಿ., ಉಪನ್ಯಾಸಕ, ವಿರಾಜಪೇಟೆ

    ಟ್ರ್ಯಾಕ್ಟರ್ ಟಿಲ್ಲರ್‌ನಂಥ ದೊಡ್ಡ ವಾಹನ ಖರೀದಿಸುವುದು ಸಣ್ಣ ಕೃಷಿಕರಿಗೆ ದೂರದ ಮಾತೇ ಸರಿ. ಈ ನಿಟ್ಟಿನಲ್ಲಿ ಕೃಷಿ ಯಂತ್ರಧಾರೆಯಿಂದ ಒಂದಷ್ಟು ರೈತರಿಗೆ ಅನುಕೂಲವಾಗುತಿತ್ತು. ಅದರೆ ಈ ಯೋಚನೆಗಳಿಂದ ಜಿಲ್ಲೆಯ ರೈತರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಯೋಜನೆಯ ಮಾಹಿತಿ ಹಾಗೂ ಅರಿವಿನ ಕೊರತೆ ಇದೆ. ಖಾಸಗಿಯವರಿಗೆ ನಿರ್ವಹಣೆನೀಡಿರುವುದರಿಂದ ರೈತರಿಗೆ ಸದುಪಯೋಗವಾಗುವುದಿಲ್ಲ.
    ಚಿತ್ರಾ ಸಿ.ಪಿ., ಕರಡಿಗೋಡು ನಿವಾಸಿ

    ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರದಲ್ಲೂ ಕೃಷಿ ಯಂತ್ರಧಾರೆ ಯೋಜನೆಯ ಘಟಕಗಳನ್ನು ಸರ್ಕಾರ ತೆರೆದಿದ್ದರೂ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ.
    ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನ ಜವಾಬ್ದಾರಿ ಖಾಸಗಿಯವರಿಗೆ ವಹಿಸಲಾಗಿದ್ದು ಬಡ ರೈತರಿಗೆ ಸೌಲಭ್ಯ ಸಿಗದಿರುವುದು ಮಾತ್ರ ನಮ್ಮ ದುರಂತ. ಇಲಾಖಾಧಿಾರಿಗಳು ತಕ್ಷಣ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಬೇಕು.
    ಸವಿತಾ ಪಿ.ಬಿ., ಇಂದಿರಾ ಬಡಾವಣೆ, ಕುಶಾಲನಗರ.

    ಕೊಡಗಿನಲ್ಲಿ ೧೬ ಹೋಬಳಿಗಳಲ್ಲೂ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ವಹಣೆಯಲ್ಲಿ ಇರುವ ೩ ಕೇಂದ್ರಗಳು ಉತ್ತಮವಾಗಿ ನಡೆಯುತ್ತಿವೆ. ಉಳಿದ ೧೩ ಕೇಂದ್ರಗಳನ್ನು ಮತ್ತೊಂದು ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಅವುಗಳಲ್ಲಿ ಸ್ವಲ್ಪ ಸಮಸ್ಯೆ ಇದೆ.
    ಸೋಮಸುಂದರ ಕೆ.ಎಂ., ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಕೊಡಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts