More

    ಹಲವು ರೋಗಕ್ಕೆ ರಾಮಬಾಣ ಬೆಚ್ಚನೆಯ ನಿಂಬೆ ನೀರು! ಇಲ್ಲಿದೆ ಉಪಯುಕ್ತ ಮಾಹಿತಿ

    ಬೆಂಗಳೂರು: ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ನಿಂಬೆ ಹಣ್ಣಿನ ಮಹತ್ವ ಹೆಚ್ಚಿದೆ. ದೇಹದ ಹಲವಾರು ಭಾಗಗಳಲ್ಲಿ ಕಾಡುವ ಸಮಸ್ಯೆಗೆ ನಿಂಬೆ ರಸದಲ್ಲಿ ಸಾಕಷ್ಟು ರೋಗ-ಮುಕ್ತ ಗುಣಗಳಿವೆ. ಅಧಿಕ ಸಂಖ್ಯೆಯ ಜನರು ಇಂದಿಗೂ ನಿಂಬೆಯನ್ನು ಮನೆ ಔಷಧವನ್ನಾಗಿ ಬಳಸುತ್ತಾರೆ. ಕಾರಣ, ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಚರ್ಮದ ಕಾಂತಿಗೆ, ಹೊಳೆಯುವ ಕೂದಲಿಗೆ, ತುರಿಕೆಗಳಿಗೆ ಹೀಗೆ ನಾನಾ ರೋಗಕ್ಕೂ ನಿಂಬೆ ರಸವನ್ನು ಮದ್ದಾಗಿ ಉಪಯೋಗಿಸಲಾಗುತ್ತದೆ.

    ಇದನ್ನೂ ಓದಿ: ‘ನಾಚಿಕೆಯಾಗಬೇಕು ಕಾಂಗ್ರೆಸ್​ಗೆ…’ ಲೋಕಸಭಾ ಟಿಕೆಟ್ ಬೆನ್ನಲ್ಲೇ ಕಂಗನಾ ವಿರುದ್ಧ ಸುಪ್ರಿಯಾ ಅವಹೇಳನಕಾರಿ ಪೋಸ್ಟ್!

    ನಿಂಬೆ ಹಣ್ಣನ್ನು ಜ್ಯೂಸ್​ ಮಾಡಿಕೊಂಡು ಕುಡಿಯುವವರ ಸಂಖ್ಯೆಯೂ ನಮ್ಮಲ್ಲಿ ಹೆಚ್ಚಿದೆ. ಅದರಲ್ಲೂ ಈಗ ಬೇಸಿಗೆ ಸಮಯ! ಅಂದಮೇಲೆ ಕೇಳಬೇಕಾ? ಮಜ್ಜಿಗೆ, ತಂಪು ಪಾನಿಯದಂತೆ ತಣ್ಣಗಿನ ನೀರಿಗೆ ನಿಂಬೆ ರಸ, ಸಕ್ಕರೆ ಕಲಿಸಿ ಜ್ಯೂಸ್​ ಮಾಡಿಕೊಂಡು ಸೇವಿಸುತ್ತಾರೆ. ಆದರೆ, ಇದೇ ರಸವನ್ನು ಬೆಚ್ಚನೆಯ ನೀರಿನೊಂದಿಗೆ ಕುಡಿದರೆ ನಮ್ಮ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತೇ?

    ನಮ್ಮ ದೇಹದಲ್ಲಿನ ಹಲವು ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಹಾಗೂ ಆರೋಗ್ಯವನ್ನು ಸಮತೋಲನದಲ್ಲಿಡುವಲ್ಲಿ ನಿಂಬೆ ರಸದ ನೀರು ಎಷ್ಟು ಪ್ರಯೋಜನಕಾರಿ ಎಂಬುದರ ಮಾಹಿತಿ ಹೀಗಿದೆ ಗಮನಿಸಿ.

    ಇದನ್ನೂ ಓದಿ: ವೆಬ್​ಕಾಸ್ಟಿಂಗ್​ನಲ್ಲಿ ಪರೀಕ್ಷಾ ಅಕ್ರಮ ಬಯಲು!: ಎಸ್​ಎಸ್​ಎಲ್​ಸಿ ಎಕ್ಸಾಂ ಇಬ್ಬರು ಶಿಕ್ಷಕರು ಅಮಾನತು, ವಿದ್ಯಾರ್ಥಿ ಡಿಬಾರ್

    • ಪಿಎಚ್​ ಹಂತವನ್ನು ಸಮತೋಲನದಲ್ಲಿಡುತ್ತದೆ.
    • ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
    • ಇಮ್ಯೂನ್​ ಸಿಸ್ಟಮ್​ ಅನ್ನು ಉತ್ತೇಜಿಸುತ್ತದೆ.
    • ಸಾದಾ ನೀರಿಗಿಂತ ಹೆಚ್ಚು ಹೈಡ್ರೇಟ್ ಆಗಿರುತ್ತದೆ.
    • ಊಟಕ್ಕೂ ಮುಂಚಿತವಾಗಿ ನಿಂಬೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ.
    • ಲಿವರ್​ ಶುದ್ಧೀಕರಣಕ್ಕೆ ಸಹಕಾರಿ.
    • ಬಾಯಿ ವಾಸನೆ ತರುವ ಬ್ಯಾಕ್ಟೀರಿಯವನ್ನು ಕೊಲ್ಲುತ್ತದೆ.
    • ನಿಮ್ಮ ಚರ್ಮ ಕಾಂತಿಯನ್ನು ಹೆಚ್ಚಿಸುತ್ತದೆ.

    ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts