More

    ಸೌಂದರ್ಯ ಜಗದೀಶ್ ಮತ್ತು ನೆರೆಮನೆ ಜಗಳ ಬೀದಿಗೆ; ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು

    ಬೆಂಗಳೂರು: ಚಲನಚಿತ್ರ ನಿರ್ಮಾಪಕ, ಬಿಲ್ಡರ್ ಸೌಂದರ್ಯ ಜಗದೀಶ್ ಮತ್ತು ಅವರ ಪಕ್ಕದ ಮನೆಯ ಜಗಳ ಮತ್ತೆ ಬೀದಿಗೆ ಬಂದಿದೆ. ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ. ತಮಗೆ ಸುಖಾಸುಮ್ಮನೆ ನಡುರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಸೌಂದರ್ಯ ಜಗದೀಶ್ ಪುತ್ರ ಮತ್ತು ಆತನ ಸ್ನೇಹಿತರ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ನಿರ್ಮಾಪಕರ ಪಕ್ಕದ ಮನೆಯ ಅನ್ನಪೂರ್ಣ ಎಂಬಾಕೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅನ್ನಪೂರ್ಣ ವಿರುದ್ಧ ಸೌಂದರ್ಯ ಜಗದೀಶ್ ಕಾರು ಚಾಲಕ ಜಾತಿ ನಿಂದನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.

    ಅನ್ನಪೂರ್ಣ ತಮ್ಮ ದೂರಿನಲ್ಲಿ ‘ಮಕ್ಕಳ ಶಾಲೆಯಲ್ಲಿ ಪಾಲಕರ ಸಭೆ ಮುಗಿಸಿಕೊಂಡು ಪತಿ ರಜತ್ ಗೌಡ ಜತೆ ಮನೆಗೆ ಮರಳುವಾಗ ಮಾರ್ಗಮಧ್ಯೆ ಮಲ್ಲೇಶ್ವರದ 17ನೇ ಅಡ್ಡರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಸೌಂದರ್ಯ ಜಗದೀಶ್ ಪುತ್ರ ಮತ್ತು ನಟ ಸ್ನೇಹಿತ್ ಹಾಗೂ ಆತನ ಕಾರು ಚಾಲಕ ರಂಜಿತ್ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಮೇಲೆ ಎಫ್‌ಐಆರ್ ದಾಖಲಾಗಿದೆ.

    ಈ ಕುರಿತು ಸುದ್ದಿಗಾರರ ಜತೆ ಮಾತನಾಡಿರುವ ಸೌಂದರ್ಯ ಜಗದೀಶ್, ಎದುರು ಮನೆಯಲ್ಲಿ ನೆಲೆಸಿರುವ ಮಂಜುಳಾ ಪುರುಷೋತ್ತಮ್, ರಜತ್, ಅನ್ನಪೂರ್ಣ ಮತ್ತು ಶಮಂತ್ ಮೇಲಿಂದ ಮೇಲೆ ನಮಗೆ ತೊಂದರೆ ಕೊಡುತ್ತಿದ್ದಾರೆ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ನನ್ನ ಮಗನ ಜೀವನವನ್ನೇ ಹಾಳು ಮಾಡಲು ಯತ್ನಿಸಿದ್ದಾರೆ. ಸುಮ್ಮನೆ ಸುಳ್ಳು ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಸೌಂದರ್ಯ ಜಗದೀಶ್ ಕಿಡಿಕಾರಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅನ್ನಪೂರ್ಣ, ಸೌಂದರ್ಯ ಜಗದೀಶ್ ಕುಟುಂಬ ನಮ್ಮ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಚಿತ್ರರಂಗದ ದಿಗ್ಗಜರೆಲ್ಲ ಸಂಧಾನ ನಡೆಸಿದರೂ ನಾವು ಪೊಲೀಸರಿಗೆ ನೀಡಿದ್ದ ದೂರು ಹಿಂಪಡೆದಿರಲಿಲ್ಲ. ನಮ್ಮ ಮನೆ ಮುಂದೆ ಕಾರು ನಿಲ್ಲಿಸದಂತೆ ಹೇಳಿದರೂ ಕೇಳದೆ ಕಾರು ನಿಲ್ಲಿಸಿ ಕ್ಯಾತೆ ತೆಗೆಯುತ್ತಾರೆ. ಸರ್ಕಾರಿ ಜಾಗವನ್ನು ಒತ್ತುವಾರಿ ಮಾಡಿಕೊಂಡಿರುವ ಕಾರಣಕ್ಕೆ ಬಿಬಿಎಂಪಿಗೆ ದೂರು ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಕಾರು ಚಾಲಕ ರಕ್ಷಿತ್ ಮೂಲಕ ಸೌಂದರ್ಯ ಜಗದೀಶ್ ಜಾತಿ ನಿಂದನೆ ಸುಳ್ಳು ದೂರು ಕೊಡಿಸಿದ್ದಾರೆ ಎಂದು ಅನ್ನಪೂರ್ಣ ಆರೋಪಿಸಿದ್ದಾರೆ. ಕೆಲ ತಿಂಗಳ ಹಿಂದೆಯೂ ವೈಯಕ್ತಿಕ ಕಾರಣಗಳಿಗೆ ಅನ್ನಪೂರ್ಣ ಮತ್ತು ಸೌಂದರ್ಯ ಜಗದೀಶ್ ಕುಟುಂಬಗಳ ಮಧ್ಯೆ ಜಗಳವಾಗಿ ಪ್ರಕರಣ ಮಹಾಲಕ್ಷ್ಮೀ ಲೇಔಟ್ ಠಾಣೆ ಮೆಟ್ಟಿಲೇರಿತ್ತು.

    ಇದು ವಿದೇಶದಲ್ಲಿನ ಪ್ರಪ್ರಥಮ ಸ್ವಂತ ಕನ್ನಡ ಭವನ; 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts