More

    ಕಾಂಗ್ರೆಸ್‌ನ ಗ್ಯಾರಂಟಿಗಳು ಅಪೂರ್ಣ

    ರಿಪ್ಪನ್‌ಪೇಟೆ: ಕಾಂಗ್ರೆಸ್ ಮುಖಂಡರು ಜನರಿಗೆ ಒಂದಷ್ಟು ಅಪೂರ್ಣವಾದ ಗ್ಯಾರಂಟಿಗಳನ್ನು ನೀಡಿ ಭಾಷಣ ಬಿಗಿಯುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವುದು ಗ್ಯಾರಂಟಿಯ ಚುನಾವಣೆಯಲ್ಲ, ಬದಲಾಗಿ ಭಾರತದ ಭವಿಷ್ಯ ರೂಪಿಸುವ ಚುನಾವಣೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿದೆ. ಕುಡಿಯುವ ನೀರಿನ ಹಾಹಾಕಾರವಿದೆ. ನೀರನ್ನು ಕೊಡುವ ಬದಲು 2 ಸಾವಿರ ರೂ. ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
    ನಿರುದ್ಯೋಗಿಗಳಿಗೆ ಭತ್ಯೆ ನೀಡುವುದಾಗಿ ಹೇಳಿ ಸೀಮಿತವಾಗಿ ಜಾರಿಗೊಳಿಸಿ ಮೋಸ ಮಾಡಿದ್ದಾರೆ. ಅಕ್ಕಿ ನೀಡುತ್ತಿರುವುದು ಕೇಂದ್ರ ಸರ್ಕಾರ. ಆದರೆ ತಾವು ನೀಡುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಗ್ರಾಮೀಣ ಜನರಿಗೆ ಸರ್ಕಾರಿ ಬಸ್ ಸೌಲಭ್ಯವೇ ಇಲ್ಲದೆ ಮಹಿಳೆಯರಿಗೆ ಬಸ್ ಫ್ರೀ ಹೇಗೆ ಸಾಧ್ಯ? ಜನರಿಗೆ ಅಪೂರ್ಣ ಕೊಡುಗೆ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿದರು.
    ರಾಜ್ಯದಲ್ಲಿ 2.51 ಲಕ್ಷ ಜನರು ಆಯುಷ್ಮಾನ್ ಭಾರತ್ ಲಾನುಭವಿಗಳಿದ್ದು, 260 ಕೋಟಿ ರೂ. ವೆಚ್ಚ ಭರಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು, ಪ್ರೇಕ್ಷಣೀಯ ಸ್ಥಳಗಳು, ಯಾತ್ರಾ ಸ್ಥಳಗಳು, ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಪರ ವಾತವರಣವಿದ್ದು ಕಾರ್ಯಕರ್ತರು ಅದನ್ನು ಮತವಾಗಿ ಪರಿವರ್ತನೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
    ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಅರಿವಿಗೆ ಬಂದೋ, ಬಾರದೆಯೋ ಹಲವು ಕಾಮಗಾರಿಗಳಿಗೆ ಮರು ಶಂಕುಸ್ಥಾಪನೆ ಮಾಡಿದ್ದಾರೆ. 420 ಕೋಟಿ ರೂ. ಅನುದಾನದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪ್ರಧಾನಿ ಮೋದಿ 2023ರ ೆಬ್ರವರಿಯಲ್ಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಉಡುಪಿ-ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯನ್ನು ಕೆಲವೇ ತಿಂಗಳುಗಳ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರೂ ಕೆಲ ದಿನಗಳ ಹಿಂದೆ ಶಾಸಕ ಬೇಳೂರು ಹೊಸನಗರದಲ್ಲಿ ಈ ಕಾಮಗಾರಿಗಳ ಪುನಃ ಶಂಕುಸ್ಥಾಪನೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
    ಸಚಿವ ಮಧು ಬಂಗಾರಪ್ಪ ಹೊದೆಡೆಯಲ್ಲೆಲ್ಲ ಸಂಸದ ರಾಘವೇಂದ್ರ ಏನು ಅಭಿವೃದ್ಧಿ ಮಾಡಿದ್ದಾರೆಂದು ಪ್ರಶ್ನಿಸುತ್ತಿದ್ದಾರೆ. ಆದರೆ ನನ್ನ ಅವಧಿಯಲ್ಲಿ ಕ್ಷೇತ್ರದಾದ್ಯಂತ ಏನು ಕೆಲಸಗಳಾಗಿವೆ ಎಂಬುದು ಸ್ವತಃ ಜನರೇ ಮಾತಾಡುತ್ತಿದ್ದಾರೆ. ಸಚಿವರಿಗೆ ಅದು ಸಾಲದಿದ್ದರೆ ಕಾರ್ಯಕರ್ತರು ಈ ಬಾರಿ ಚುನಾವಣೆಯಲ್ಲಿ ಮತ ಕ್ರೋಡೀಕರಣದ ಮೂಲಕ ತಕ್ಕ ಉತ್ತರ ನೀಡಿ ಎಂದರು.
    ಮುಖಂಡರಾದ ಆರ್.ಟಿ.ಗೋಪಾಲ, ಎನ್.ಸತೀಶ, ಬೆಳ್ಳೂರು ತಿಮ್ಮಪ್ಪ, ಎಂ.ಬಿ. ಮಂಜುನಾಥ, ಪದ್ಮಾ ಸುರೇಶ, ನಾಗರತ್ನ, ಸುಂದರೇಶ, ಸುರೇಶ ಸಿಂಗ್, ದೇವೇಂದ್ರ ಗೌಡ, ಜಂಬಳ್ಳಿ ಗಿರೀಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts