

Jr NTR : ಸೆಲೆಬ್ರಿಟಿಗಳದ್ದು ಐಷಾರಾಮಿ ಜೀವನ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಚಿಕ್ಕ ವಾಚ್ನಿಂದ ಹಿಡಿದು ದೊಡ್ಡ ಕಾರುಗಳವರೆಗೂ ಸೆಲೆಬ್ರಿಟಿಗಳು ಬಳಸುವ ವಸ್ತುಗಳೆಲ್ಲ ತುಂಬಾ ದುಬಾರಿಯಾಗಿರುತ್ತವೆ. ಒಮ್ಮೊಮ್ಮೆ ಅವರು ಬಳಸುವ ವಸ್ತುಗಳ ಬೆಲೆ ತಿಳಿದು ಹುಬ್ಬೇರಿಸಿರುತ್ತೇವೆ. ಇದೀಗ ಅಂಥದ್ದೇ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ.
ಜೂನಿಯರ್ ಎನ್ಟಿಆರ್ ಪ್ರಸ್ತುತ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು 'ವಾರ್ 2' ಚಿತ್ರದ 2ನೇ ಭಾಗದ ಶೂಟಿಂಗ್ನಲ್ಲಿ ಭಾಗವಹಿಸಿ ತಮ್ಮ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಸಿನಿಮಾದ ಶೂಟಿಂಗ್ ಈ ತಿಂಗಳ 22 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಒಂದು ಶೆಡ್ಯೂಲ್ ಪೂರ್ಣಗೊಂಡಿದೆ. ಏಪ್ರಿಲ್ 22 ರಿಂದ ಪ್ರಾರಂಭವಾಗಲಿರುವ ಶೆಡ್ಯೂಲ್ನಲ್ಲಿ ಜೂನಿಯರ್ ಎನ್ಟಿಆರ್ ಭಾಗವಹಿಸಲಿದ್ದಾರೆ. ಸದ್ಯ ವಿರಾಮದಲ್ಲಿದ್ದ ಎನ್ಟಿಆರ್ ತಮ್ಮ ಕುಟುಂಬದೊಂದಿಗೆ ದುಬೈಗೆ ರಜೆಯ ಮೇಲೆ ತೆರಳಿದ್ದಾರೆ.
ಈ ಪ್ರವಾಸದ ಸಂದರ್ಭದಲ್ಲಿ ಎನ್ಟಿಆರ್ ತಂಗಿದ್ದ ಹೋಟೆಲ್ ಸಿಬ್ಬಂದಿ ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಆ ಫೋಟೋದಲ್ಲಿ ಜೂನಿಯರ್ ಎನ್ಟಿಆರ್ ಧರಿಸಿರುವ ಶರ್ಟ್ ಎಟ್ರೋ ಕಂಪನಿಯದ್ದಾಗಿದ್ದು, ಅದರ ಬೆಲೆ ಬರೋಬ್ಬರಿ 85 ಸಾವಿರ ರೂಪಾಯಿಗಳು ಎಂಬುದನ್ನು ನೆಟ್ಟಿಗರು ಪತ್ತೆಹಚ್ಚಿದ್ದಾರೆ. ಬೆಲೆ ಕೇಳಿ ಅನೇಕ ಮಂದಿ ಬೆರಗಾಗಿದ್ದು, ತರಹೇವಾರಿ ಕಾಮೆಂಟ್ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರು "ಅದು ನಮ್ಮ ಎರಡು ತಿಂಗಳ ಸಂಬಳ" ಎಂದು ಕಾಮೆಂಟ್ ಮಾಡುತ್ತಿದ್ದರೆ. ಇನ್ನು ಕೆಲವರು ಜೂನಿಯರ್ ಎನ್ಟಿಆರ್ ನಂತಹ ಸ್ಟಾರ್ ನಟ ಇಷ್ಟೊಂದು ದುಬಾರಿಯಾದ ಬಟ್ಟೆ ಧರಿಸುವುದರಲ್ಲಿ ಏನು ತಪ್ಪಿದೆ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಈ ಶರ್ಟ್ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.
ದುಬೈ ರಜೆಯಿಂದ ಹಿಂದಿರುಗಿದ ತಕ್ಷಣ, ಜೂನಿಯರ್ ಎನ್ಟಿಆರ್ ಆವರು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಡ್ರ್ಯಾಗನ್' ಚಿತ್ರದ ಚಿತ್ರೀಕರಣಕ್ಕೆ ಸೇರಿಕೊಳ್ಳಲಿದ್ದಾರೆ. (ಏಜೆನ್ಸೀಸ್)