ಬನ್ನಿ.. ನನ್ನೊಂದಿಗೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈ ಜೋಡಿಸಿ.. ಯುವಕರಿಗೆ Jr NTR ಕರೆ

NTR
Published on

 ಹೈದ್ರಾಬಾದ್​: ಟಾಲಿವುಡ್​​ ನಟ ಜೂನಿಯರ್​ ಎನ್​​ಟಿಆರ್​​ ( Jr NTR ) ಅವರು ಡ್ರಗ್ಸ್ ಮುಕ್ತ ಸಮಾಜಕ್ಕೆ ಶ್ರಮಿಸುತ್ತಿರುವ ತೆಲಂಗಾಣ ಸರ್ಕಾರಕ್ಕೆ ಯುವಕರು ಸಹಕರಿಸಬೇಕು ಎಂದು ಕರೆ ನೀಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಯುವಕರು ಮಾದಕ ವಸ್ತುಗಳಿಗೆ ಆಕರ್ಷಿತರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ . ಈ ಕ್ರಮದಲ್ಲಿ ಮಾದಕ ದ್ರವ್ಯ ಮುಕ್ತ ತೆಲಂಗಾಣಕ್ಕಾಗಿ ಆ್ಯಂಟಿ ನಾರ್ಕೋಟಿಕ್ ತಂಡವನ್ನು ಬೆಂಬಲಿಸುವ ಹೊಣೆಗಾರಿಕೆ ಎಂದು ತಾರಕ್ ಟ್ವಿಟ್ಟರ್ ನಲ್ಲಿ ವಿಶೇಷ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವ್ಯಸನ ಮುಕ್ತ ಸಮಾಜಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಸಲಹೆ ನೀಡಿದರು.

“ನಮ್ಮ ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಆದರೆ ಕೆಲವರು ತಾತ್ಕಾಲಿಕ ಸುಖಕ್ಕಾಗಿಯೋ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿರುವುದು ತುಂಬಾ ಬೇಸರದ ಸಂಗತಿ. ಜೀವನ ಅಮೂಲ್ಯವಾದುದು. ಬನ್ನಿ ನನ್ನೊಂದಿಗೆ ಕೈ ಜೋಡಿಸಿ. ಮಾದಕ ದ್ರವ್ಯ ಮುಕ್ತ ಸಮಾಜದ ಕಡೆಗೆ ತೆಲಂಗಾಣ ಸರ್ಕಾರದ ಬದ್ಧತೆಯ ಭಾಗವಾಗಿರಿ. ರಾಜ್ಯದಲ್ಲಿ ಯಾರಾದರೂ ಡ್ರಗ್ಸ್ ಮಾರಾಟ, ಖರೀದಿ, ಬಳಕೆ ಅಥವಾ ಬಳಸುತ್ತಿದ್ದರೆ ಕೂಡಲೇ ಆ್ಯಂಟಿ ನಾರ್ಕೋಟಿಕ್ಸ್ ಬ್ಯೂರೋಗೆ ಮಾಹಿತಿ ನೀಡಿ ಎಂದು ಎನ್ ಟಿಆರ್ ವಿಡಿಯೋದಲ್ಲಿ ಹೇಳಿದ್ದಾರೆ.

ಸದ್ಯ ಎನ್‌ಟಿಆರ್‌ ಅಭಿನಯದ ದೇವರ ಚಿತ್ರ ಇನ್ನೆರಡು ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಭಾರೀ ನಿರೀಕ್ಷೆಗಳ ನಡುವೆ ತಯಾರಾದ ಈ ಚಿತ್ರ ಸೆಪ್ಟೆಂಬರ್ 27 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net