ಕಾರವಾರ ಅರ್ಬನ್‌ ಬ್ಯಾಂಕ್‌ಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಭೇಟಿ

ATTACHMENT DETAILS
Published on

ಕಾರವಾರ: ನಗರದ ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ಅವ್ಯವಹಾರದ ಬಗ್ಗೆ ಆರ್‌ಬಿಐ ಹಾಗೂ ಸಹಕಾರ ಸಂಘಗಳ ಇಲಾಖೆಯಿಂದ ಪ್ರತ್ಯೇಕ ತನಿಖೆ ನಡೆಸಲು ಕ್ರಮ ವಹಿಸಲಾಗುವುದು ಎಂದು ಸಹಕಾರಿ ಸಂಘಗಳ ಬೆಳಗಾವಿ ವಿಭಾಗೀಯ ಜಂಟಿ ನಿಬಂಧಕ ಡಾ.ಸುರೇಶ ಗೌಡ ಭರವಸೆ ನೀಡಿದರು.
ಗುರುವಾರ ಕಾರವಾರ ಅರ್ಬನ್ ಬ್ಯಾಂಕ್‌ಗೆ ಭೇಟಿ ನೀಡಿ ಅವರು ದಾಖಲೆಗಳನ್ನು ಪರಿಶೀಲಿಸಿ ಗ್ರಾಹಕರ ಜತೆಗೆ ಮಾತನಾಡಿದರು. ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಂಡರು. ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈಗಾಗಲೇ ತನಿಖೆ ಸಂಬಂಧ ನಮ್ಮ ಇಲಾಖೆಯ ಹಿರಿಯ ಅಕಾರಿಗಳೊಂದಿಗೆ ಮಾತನಾಡಿ, ಆರ್‌ಬಿಐಗೆ ಪತ್ರ ಬರೆಯಲು ವಿನಂತಿಸಲಾಗಿದೆ ಎಂದರು.
ಸಹಕಾರಿ ಇಲಾಖೆ ಆಡಳಿತಾತ್ಮ ವಿಚಾರವನ್ನು, ಆರ್‌ಬಿಐ ಹಣಕಾಸಿನ ವಿಚಾರವನ್ನು ನೋಡಿಕೊಳ್ಳುತ್ತದೆ. ಆರ್‌ಬಿಐ ಹಾಗೂ ಸಹಕಾರ ಇಲಾಖೆ ಪ್ರತ್ಯೇಕ ತನಿಖೆ ನಡೆಸುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಗ್ರಾಹಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಸರ್ಕಾರ ನಿಮ್ಮ ಜತೆಗಿದೆ ಎಂದರು.
ಮಾರ್ಚ್ 2024ರಲ್ಲಿ ಆಡಿಟ್ ಮಾಡುವಾಗ ಠೇವಣಿಯಲ್ಲಿ ವ್ಯತ್ಯಾಸ ಬಂದಿದ್ದ ಕಾರಣ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಆದರೆ, ದೂರು ಏಕೆ ದಾಖಲಾಗಿಲ್ಲ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಆಡಳಿತ ಮಂಡಳಿಯು 10 ವರ್ಷಗಳ ಅವಯಲ್ಲಿ ಅವ್ಯವಹಾರವಾಗಿದೆ ದೂರಿನಲ್ಲಿ ತಿಳಿಸಿದ್ದು, ಹಿಂದಿನ ಪ್ರಧಾನ ವ್ಯವಸ್ಥಾಪಕ ಗುರುದಾಸ ಎನ್ನುವವರು 2022-23ವರೆಗೂ ಲೆಕ್ಕಪತ್ರ ನೋಡುತ್ತಿದ್ದರು. ಅಲ್ಲಿಯವರೆಗೆ ಬ್ಯಾಲೆನ್ಸ್ ಶೀಟ್ ಸರಿಯಾಗಿರುವಂತೆ ಮೇಲ್ನೋಟಕ್ಕೆ ಕಂಡುಬAದಿದೆ. ಆಡಳಿತ ಮಂಡಳಿಯಲ್ಲಿ ಅನುಮೋದನೆ ಕೂಡಾ ಆಗಿದೆ ಎಂದು ದಾಖಲೆಯನ್ನು ತೋರಿಸಿದ್ದಾರೆ. ಆದರೆ, ಕಳೆದ ಮಾರ್ಚ್ ಅಂತ್ಯದಲ್ಲಿ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ವ್ಯತ್ಯಾಸ ಬಂದಿದೆ ಎಂದು ತಿಳಿದಿದೆ ಎಂದರು.
ಈ ಬಗ್ಗೆ ವಿಚಾರಣೆ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಎಷ್ಟು ಸಾಲ ನೀಡಲಾಗಿದೆ, ಠೇವಣಿ ಎಷ್ಟಿದೆ, ಅವ್ಯವಹಾರವಾಗಿದ್ದರೆ ಆ ಹಣ ಎಲ್ಲಿಗೆ ವರ್ಗಾವಣೆಯಾಗಿದೆ, ಯಾವ ಉದ್ದೇಶಕ್ಕೆ ಬಳಕೆಯಾಗಿದೆ ಇತ್ಯಾದಿ ವಿಚಾರಣೆಯಿಂದಲೇ ಎಲ್ಲ ವಿವರ ತಿಳಿಯಬೇಕಿದೆ. ಆಡಳಿತ ಮಂಡಳಿ ದಿ. ಗುರುದಾಸ ಅವರ ಮೇಲೆ ಆರೋಪ ಮಾಡಿದ್ದು, ತನಿಖೆಯ ಬಳಿಕ ಯಾರು ತಪ್ಪಿತಸ್ಥರು ಎನ್ನುವುದು ತಿಳಿಯುತ್ತದೆ ಎಂದರು.

ಮತ್ತೆ ಬ್ಯಾಂಕ್‌ಗೆ ಮುತ್ತಿದ ಗ್ರಾಹಕರು

ಬ್ಯಾಂಕ್ ದಿವಾಳಿಯಾಗಿದೆ ಎಂದು ಆಡಳಿತ ಮಂಡಳಿ ಎರಡು ವಾರಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಘೋಷಿಸಿದ ಬೆನ್ನಲ್ಲೇ ಪ್ರತಿ ದಿನ ನೂರಾರು ಜನರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ತಮ್ಮ ಠೇವಣಿ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. 5 ಲಕ್ಷದವರೆಗಿನ ಠೇವಣಿಗೆ ಇನ್ಶುರೆನ್ಸ್ ಇದೆ. ಉಳಿದ ಹಣವನ್ನು ಠೇವಣಿ ಅವಧಿ ಮುಕ್ತಾಯವಾದ ನಂತರ ನಾವು ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿ ವಾಪಸ್ ಕಳಿಸುತ್ತಿದ್ದಾರೆ. ಮಕ್ಕಳ ಮದುವೆಗೆ ಹಣ ಇಟ್ಟವರು. ಪಿಂಚಣಿ ಹಣವನ್ನು ತೊಡಗಿಸಿದ ವೃದ್ಧರು. ದುಡಿದ ಹಣವನ್ನು ಭವಿಷ್ಯಕ್ಕಾಗಿ ಕೂಡಿಟ್ಟ ಮೀನುಗಾರ ಮಹಿಳೆಯರು. ಹೀಗೆ ಸಾಕಷ್ಟು ಬಡವರೂ ಇಲ್ಲಿ ಹಣ ತೊಡಗಿಸಿದ್ದು, ಆತಂಕದಲ್ಲಿದ್ದಾರೆ.
ಗುರುವಾರ ಜಂಟಿ ನಿಂಬಂಧಕರು ಆಗಮಿಸಿರುವುದನ್ನು ತಿಳಿದು ಬ್ಯಾಂಕಿನ ನೂರಾರು ಆಗ್ರಹಕರು ಆಗಮಿಸಿ ತಮ್ಮ ಅಳಲನ್ನು ತೋಡಿಕೊಂಡರು. ಡಾ.ಸುರೇಶ ಗೌಡ, ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ಅಂದಾಜು 54 ಕೋಟಿ ಅವ್ಯವಹಾರವಾಗಿದೆ ಎಂದು ಪೊಲೀಸ್ ದೂರು ನೀಡಲಾಗಿದೆ ಎನ್ನುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಕೂಡಲೇ ಪ್ರಾಥಮಿಕ ವರದಿ ನೀಡುವಂತೆ ಅಽಕಾರಿಗಳಿಗೆ ಸೂಚಿಸಿದ್ದೆ. ಸಾರ್ವಜನಿಕರಿಗೆ ತೊಂದರೆ ಆಗಿರುವ ಕಾರಣ ಸ್ವತಃ ನಾನೇ ಆಗಮಿಸಿ ದಾಖಲೆ ಪರಿಶೀಲನೆ ಮಾಡಿದ್ದು, ಸಾರ್ವಜನಿಕರು ಶಾಂತರೀತಿಯಿAದ ಇರಬೇಕು. ಸರ್ಕಾರ ನಿಮ್ಮ ಜತೆಗಿದೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net