More

    ಯುದ್ಧಪೀಡಿತ ಇಸ್ರೇಲ್​ಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಭೇಟಿ

    ನವದೆಹಲಿ: ಇಸ್ರೇಲ್​ ಹಾಗೂ ಹಮಾಸ್​ ನಡುವಿನ ಯುದ್ಧ ಇಂದಿಗೆ ಶುರುವಾಗಿ 11 ದಿನಗಳು ಕಳೆದಿದ್ದು, ಯುದ್ಧ ಆರಂಭವಾದ ದಿನದಿಂದಲೂ ಇಸ್ರೇಲ್​ ಬೆನ್ನಿಗೆ ನಿಂತಿರುವ ಅಮೆರಿಕ ತನ್ನ ಸಹಾಯಹಸ್ತವನ್ನು ಚಾಚುತ್ತ ಬಂದಿದೆ. ಇತ್ತ ಗಾಜಾ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಯುಎಸ್​ ಅಧ್ಯಕ್ಷ ಜೋ ಬಿಡೆನ್ ಬುಧವಾರ ಇಸ್ರೇಲ್​ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

    ಈ ಕುರಿತು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕೆನ್​ ಪ್ರಕಟಣೆ ಒಂದನ್ನು ಹೊರಡಿಸಿದ್ದು, ಬುಧವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಇಸ್ರೇಲ್​ಗೆ ಭೇಟಿ ನೀಡಿಲಿದ್ದಾರೆ. ಯುದ್ಧಪೀಡಿತ ಇಸ್ರೇಲ್​ಗೆ ಬಿಡನ್​ ಭೇಟಿ ನೀಡುತ್ತಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ.

    ಇದನ್ನೂ ಓದಿ: VIDEO| ನಿರ್ಮಾಣ ಹಂತದಲ್ಲಿದ್ದ ಮುಂಬೈ-ಗೋವಾ ಚತುಷ್ಪಥ ಹೆದ್ದಾರಿ ಮೇಲ್ಸೇತುವೆ ಕುಸಿತ

    ಅಮೆರಿಕಾದ ಅಧ್ಯಕ್ಷರಾದ ಜೋ ಬಿಡೆನ್ ಅವರು ಇಸ್ರೇಲ್​ ಹಾಗೂ ಯುಎಸ್​ ನಡುವಿನ ಭದ್ರೆತೆಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಹಮಾಸ್​ ಸೇರಿದಂತೆ ಇತರೆ ಭಯೋತ್ಪಾದಕರಿಂದ ತನ್ನ ಜನರನ್ನು ರಕ್ಷಿಸಲು ಮತ್ತು ಭವಿಷ್ಯದ ದಾಳಿಯನ್ನು ತಡೆಯಲು ಇಸ್ರೇಲ್ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ. ಎಂದು ವಿದೇಶಾಂಗ ಇಲಾಖೆಯ ಕಾರ್ಯುದರ್ಶಿ ಆ್ಯಂಟನಿ ಬ್ಲಿಂಕೆನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇಸ್ರೇಲ್​ ಹಾಗೂ ಹಮಾಸ್​ ನಡುವಿನ ಭೀಕರ ಯುದ್ಧದಲ್ಲಿ 4000 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 1,400 ಮಂದಿ ಇಸ್ರೇಲ್‌ನವರಾದರೆ, 2,750 ಮಂದಿ ಪ್ಯಾಲೆಸ್ಟಿನ್‌ಗೆ ಸೇರಿದವರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts