ಶ್ರೀಘ್ರವೇ 310 ಅರಣ್ಯ ವೀಕ್ಷಕರ ನೇಮಕಾತಿ; 10,12ನೇ ತರಗತಿ ಪೂರ್ಣಗೊಳಿಸಿದವರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ

KFD
Published on

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆ (ಕೆಎಲ್​ಡಿ)ಯ ವತಿಯಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಇದರ ಅನ್ವಯ ಅರಣ್ಯ ವೀಕ್ಷಲ (ಫಾರೆಸ್ಟ್​ ವಾಚರ್​) ಹುದ್ದೆಗಳಿಗೆ ನೇಮಕಾತಿ ನಡೆಯಲಿವೆ. ಆಸಕ್ತ ಅಭ್ಯರ್ಥಿಗಳು ಇಲ್ಲಿ ನೀಡಲಾದ ಮಾಹಿತಿಗಳ ಅನುಸಾರ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

ಒಟ್ಟು 310 ಅರಣ್ಯ ವೀಕ ಹುದ್ದೆಗಳಿವೆ.

ವಿಭಾಗವಾರರು ಹುದ್ದೆಗಳು

  • ಬೆಂಗಳೂರು ವೃತ್ತ 33
  • ಬೆಳಗಾವಿ ವೃತ್ತ 20
  • ಬಳ್ಳಾರಿ ವೃತ್ತ 20
  • ಚಾಮರಾಜನಗರ 32
  • ಚಿಕ್ಕಮಗಳೂರು ವೃತ್ತ 25
  • ಧಾರವಾಡ ವೃತ್ತ 7
  • ಹಾಸನ ವೃತ್ತ 20
  • ಕೆನರಾ ವೃತ್ತ 32
  • ಕೊಡಗು ವೃತ್ತ 16
  • ಕಲಬುರಗಿ ವೃತ್ತ 23
  • ಮಂಗಳೂರು 20
  • ಮೈಸೂರು ವೃತ್ತ 32
  • ಶಿವಮೊಗ್ಗ ವೃತ್ತ 30

ಹೀಗೆ ಅರ್ಜಿ ಸಲ್ಲಿಸಿ

  • ಕರ್ನಾಟಕ ಅರಣ್ಯ ಇಲಾಖೆ (ಕೆಎಲ್​ಡಿ)ವೆಬ್​ಸೈಟ್​ ಲಾಗಿನ್​ ಮಾಡಿ
  • ಆನ್​ಲೈನ್​ ನಮೂನೆಯ ಅರ್ಜಿಯನ್ನು ಭರ್ತಿ ಮಾಡಿ
  • ಸೂಕ್ತ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿಬೇಕು
  • ಶುಲ್ಕ ಪಾವತಿಸಿ ಅರ್ಜಿ ಕಳುಹಿಸಬೇಕು
  • 26.10.2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನ.

ಅರ್ಹತೆಗಳು ಏನು?

ಶೈಣಿಕ : ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿ ಎಸ್​ಎಸ್​ಎಲ್​ಸಿ ಅಥವಾ ಪಿಯುಸಿ ತೇರ್ಗಡೆಯಾಗಿರಬೇಕು.

ವಯೋಮಿತಿ: ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕಿದ್ದು, 35 ವರ್ಷದೊಳಗಿರುವ ಸಾಮಾನ್ಯ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು. 2ಎ, 2ಬಿ, 3ಎ,3ಬಿ ಹಾಗೂ ಒಬಿಸಿಗಳಿಗೆ 3 ವರ್ಷ, ಎಸ್ಸಿ,ಎಸ್ಟಿಗಳಿಗೆ 5 ವರ್ಷ ವಿನಾಯಿತಿ ನೀಡಲಾಗಿದೆ.

ಶುಲ್ಕ ಪಾವತಿ, ಅಭ್ಯರ್ಥಿ ಆಯ್ಕೆ

ಸಾಮಾನ್ಯ ಅಭ್ಯರ್ಥಿಯು 125 ರೂ. ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 45ರೂ. ನಿಗದಿಪಡಿಸಲಾಗಿದೆ. ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕಿಯ ಮತೆ ತಪಾಸಣೆ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ವೇತನ ಶ್ರೇಣಿ: ಅರಣ್ಯ ವೀಕ್ಷಕನಾಗಿ ಆಯ್ಕೆಯಾದವರಿಗೆ ಪ್ರತಿ ತಿಂಗಳು 21,400 ರೂ.ನಿಂದ 42,000 ರೂ. ವೇತನ ನೀಡಲಾಗುತ್ತದೆ.

ಅರಣ್ಯ ವೀಕ್ಷಕನ ಕರ್ತವ್ಯ

ಅರಣ್ಯ ವೀಕ್ಷಕನು ಅರಣ್ಯದೊಳಗೆ ಅಕ್ರಮವಾಗಿ ನುಸುಳಿ ಬೇಟೆಯಾಡುವಿಕೆ ಕುರಿತು ನಿಗಾ ವಹಿಸಬೇಕಿದ್ದು, ಇದರೊಂದಿಗೆ ಮರದ ದಿಮ್ಮಿಗಳ ಹಾಗೂ ಪ್ರಾಣಿಗಳ ಸ್ಮಗ್ಲಿಂಗ್​ ನಡೆಯದಂತೆ ನಿಗಾವಹಿಸಬೇಕು. ಇದರೊಂದಿಗೆ ಅರಣ್ಯ ಸಂಪತ್ತನ್ನು ರಕ್ಷಿಸುವಲ್ಲಿ ಅರಣ್ಯ ವೀಕ್ಷಕನ ಕಾರ್ಯ ಮಹತ್ತರವಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net