More

  ಉತ್ತರ ಭಾರತದಲ್ಲಿ ಹಿಡಿತಕ್ಕೆ ಸಿಗದ ಬಿಸಿಲು!: ಜಾರ್ಖಂಡ್​ನಲ್ಲಿ ಹೀಟ್​ವೇವ್​ಗೆ 4 ಬಲಿ! 1300 ಮಂದಿ ಆಸ್ಪತ್ರೆಗೆ ದಾಖಲು

  ರಾಂಚಿ: ಉತ್ತರ, ಪೂರ್ವ ಮತ್ತು ಪಶ್ಚಿಮ ಭಾರತವು ಇತ್ತೀಚಿನ ದಿನಗಳಲ್ಲಿ ತೀವ್ರ ಶಾಖದ ಹಿಡಿತದಲ್ಲಿದ್ದು, ಜಾರ್ಖಂಡ್​ನಲ್ಲಿ ಶಾಖಾಘಾತಕ್ಕೆ ನಾಲ್ಕು ಮಂದಿ ಸಾವನ್ನಪ್ಪಿದದ್ದಾರೆ. 1.326 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿ ನರೇಂದ್ರ ಮೋದಿ ಧ್ಯಾನಕ್ಕೆ ಆಕ್ಷೇಪ: ಈ ನಾಟಕ ಯಾಕೆ? ಎಂದ ಖರ್ಗೆ

  ಶಾಖಾಘಾತಕ್ಕೆ ಖಳಗಾದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು ಮತ್ತು ಇತರೆ ವೈದ್ಯಕೀಯ ಸೌಲಭ್ಯಗಳನ್ನು ಹವಾನಿಯಂತ್ರಿತ ಕೊಠಡಿಗಳು ಮತ್ತು ಖಾಲಿ ಹಾಸಿಗೆಗಳನ್ನು ಹೀಟ್ ಸ್ಟ್ರೋಕ್ ರೋಗಿಗಳಿಗೆ ಮೀಸಲಿಡಲು ತಿಳಿಸಲಾಗಿದೆ ಎಂದು ಅವರು ಹೇಳಿದರು.

  “ಪಲಾಮುದಲ್ಲಿ ಮೂವರು ಮತ್ತು ಜಮ್ಶೆಡ್‌ಪುರದಲ್ಲಿ ಒಬ್ಬರು ಶಾಖಾಘಾತಕ್ಕೆ ಬಲಿಯಾಗಿದ್ದಾರೆ. ಇವರೂ ಯಾರು ಆಸ್ಪತ್ರೆಯಲ್ಲಿ ಮೃತಪಟ್ಟಿಲ್ಲ. ಬಿಸಿಗಾಳಿ ಸಂಬಂಧಿಸಿದಂತೆ ಸಮಸ್ಯೆಗೆ ಒಳಗಾಗಿರುವ ವಿವಿಧ ಜಿಲ್ಲೆಗಳ 1,326 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

  ಇದುವರೆಗೆ 63 ಹೀಟ್ ಸ್ಟ್ರೋಕ್ ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ (ಜಾರ್ಖಂಡ್) ಮಿಷನ್ ನಿರ್ದೇಶಕ ಡಾ ಅಲೋಕ್ ತ್ರಿವೇದಿ ಪಿಟಿಐಗೆ ತಿಳಿಸಿದ್ದಾರೆ.

  ಜಾರ್ಖಂಡ್‌ನ 24 ಜಿಲ್ಲೆಗಳಲ್ಲಿ ಬಹುತೇಕ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಾಗಿದೆ. ದಾಲ್ಟೋಂಗಂಜ್​ ಮತ್ತು ಗರ್ಹಾಗಳಲ್ಲಿ 47 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸಿದೆ. ಶಾಖಾಘಾತವು ಪ್ರಾಣಿಗಳ ಮೇಲೆ, ವಿಶೇಷವಾಗಿ ಬಾವಲಿಗಳ ಮೇಲೆ ಪರಿಣಾಮ ಬೀರಿದ್ದು ಹಜಾರಿಬಾಗ್, ರಾಂಚಿ, ಗರ್ಹಾ ಮತ್ತು ಪಲಮುಗಳಲ್ಲಿ ಬಾವಲಿಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

  ಮೋದಿ ನಾಯಕತ್ವದಲ್ಲಿ 3ನೇ ಬಾರಿಗೆ ಬಿಜೆಪಿ ಸರ್ಕಾರ ಕಾರ್ಯಾರಂಭ: ಸಿಎಂ ಶರ್ಮಾ ವಿಶ್ವಾಸ

  See also  Stray Dog Menace At Kolar DC Office | ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೀದಿ ನಾಯಿಗಳ ಹಾವಳಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts