

ಕೊಲ್ಕತಾ: ಜಾರ್ಖಂಡ್ ರಿಯಾ ಕುಮಾರಿ ಎಂಬ ನಟಿಯನ್ನು ದುಷ್ಕರ್ಮಿಗಳು ಹಾಡ ಹಗಲೇ ರಾಂಚಿ–ಕೊಲ್ಕತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಇಂದು(ಡಿ.28) ಮುಂಜಾನೆ 6ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರಿಯಾಗಿದೆ.
ರಿಯಾ ಕುಮಾರಿ, ತನ್ನ ಮೂರು ವರ್ಷದ ಮಗಳು ಹಾಗೂ ಗಂಡ ಪ್ರಕಾಶ್ ಕುಮಾರ್ ಜತೆಗೆ ಕೊಲ್ಕತಾಗೆ ಕಾರಿನಲ್ಲಿ ತೆರಳುತ್ತಿದ್ದರು. ಹೆದ್ದಾರಿಯ ಮಹೀಶ್ರೇಖಾ ಸೇತುವೆ ಕಾರು ನಿಲ್ಲಿಸಿದಾಗ ದುಷ್ಕರ್ಮಿಗಳು ದರೋಡೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಹಲ್ಲೆ ಮಾಡಿದ್ದಾರೆ. ವಿರೋಧಿಸಲು ಹೋದ ರಿಯಾ ಕುಮಾರಿಗೆ ಅತ್ಯಂತ ಹತ್ತಿರದಿಂದ ಗುಂಡಿಟ್ಟಿದ್ದಾರೆ. ಇದಿರಿಂದ ತೀವ್ರ ರಕ್ತಸ್ತಾವ ಉಂಟಾಗಿ ಆಸ್ಪತ್ರೆಗೆ ರವಾನಿಸುವ ಮೊದಲೇ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಘಟನೆಯ ಸಂಬಂಧ ನಟಿಯ ಪತಿ ಪ್ರಕಾಶ್ ಕುಮಾರ್ ಪೊಲೀಸ್ ದೂರು ನೀಡಿದ್ದಾರೆ. ಪತಿಯ ಎದುರೇ ನಟಿಯ ಕೊಲೆ ನಡೆದಿರುವ ಕಾರಣ ಅವರನ್ನೂ ಪೊಲೀಸರು ಪ್ರಾಥಮಿಕವಾಗಿ ತನಿಖೆ ಮಾಡಿದ್ದಾರೆ. ತನಿಖೆಯ ನಂತರ ನಟಿಯ ಹತ್ಯೆಯ ಹಿಂದೆ ಪತಿ ಪ್ರಕಾಶ್ ಕುಮಾರ್ ಕೈವಾಡ ಇರಬಹುದು ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ತನಿಖೆಯ ಸಂದರ್ಭದಲ್ಲಿ ಪ್ರಕಾಶ್ ಕುಮಾರ್ ಹೇಳಿಕೆಗಳು ಅಸ್ಪಷ್ಟವಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)