

ಬಾಲಿವುಡ್ ಬ್ಯೂಟಿ ಜಾನ್ವಿ ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ಸಧ್ಯ ಸೌತ್ ಸಿನಿರಂಗಕ್ಕೂ ಕಾಲಿಟ್ಟಿದ್ದಾರೆ. ಲುಗಿನಲ್ಲಿ ಎನ್‌ಟಿಆರ್ ಜೊತೆ ದೇವರ ಸಿನಿಮಾ ಮೂಲಕ ಸೌತ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಜಾನ್ವಿ.
ಜಾನ್ವಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಸಧ್ಯ ಝಗಮಗಿಸುವ ಡ್ರೆಸ್ನಲ್ಲಿ ಜಾನ್ವಿ ಸಖತ್ ಆಗಿ ಕಾಣಿಸಿಕೊಂಡಿದ್ದು, ಫೋಟೋಗಳು ವೈರಲ್ ಆಗಿವೆ.
ʼದೇವರʼ ಸಿನಿಮಾ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸಲು ಜಾನ್ವಿಗೆ ಅವಕಾಶ ಸಿಕ್ಕಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್‌ನ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಮಾತ್ರವಲ್ಲದೆ, ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಸಕ್ರಿಯರಾಗಿದ್ದಾರೆ ಜಾನ್ವಿ.
ಜಡ್ ಘಂಡೂರ್ ವಿನ್ಯಾಸ ಮಾಡಿರುವಂತಹ ಬೆಳ್ಳಿ ಬಣ್ಣದ ಮೆಟಲ್ ಮೆಶ್ ದಿರಿಸಿನಲ್ಲಿ ಜಾನ್ವಿ ಕಪೂರ್ ಕಂಗೊಳಿಸಿದ್ದಾರೆ.
Elle Beauty Awards 2023ಯಲ್ಲಿ ಭಾಗವಹಿಸಿದ ಜಾನ್ವಿ, ಕಣ್ಮನ ಸೆಳೆಯುವ ಬೆಳ್ಳಿ ಬಣ್ಣದ ಉಡುಗೆಯಲ್ಲಿ ರೆಡ್ ಕಾರ್ಪೆಟ್ ಮೇಲೆ ರ್ಯಾಂಪ್ ವಾಕ್ ಮಾಡಿ, ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಜಾನ್ವಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಈ ಫೋಟೋಗಳಿಗೆ ನೆಟ್ಟಿಗ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟುಇಗರು ಈಕೆಯನ್ನ ಶೈನಿಂಗ್ ಸ್ಟಾರ್ ಅಂತಲೂ ಕರೆದಿದ್ದಾರೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ಸದ್ಯ ಹಿಂದಿ ಸಿನಿಮಾರಂಗ ಮಾತ್ರವಲ್ಲದೆ ಸೌತ್ ಸಿನಿಮಾ ರಂಗದತ್ತಲೂ ಮುಖ ಮಾಡಿದ್ದಾರೆ.